ADVERTISEMENT

ಶ್ರೀರಂಗಪಟ್ಟಣ: ದೇವಾಲಯದ ಗೇಟ್‌ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:29 IST
Last Updated 12 ನವೆಂಬರ್ 2024, 16:29 IST
ಜಿಷ್ಣು
ಜಿಷ್ಣು   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಹುಂಜನಕೆರೆ ಗ್ರಾಮದಲ್ಲಿ ಚನ್ನಕೇಶವ ದೇವಾಲಯದ ಕಾಂಪೌಂಡ್‌ಗೆ ಅಳವಡಿಸಲು ತಂದಿರಿಸಿದ್ದ ಕಬ್ಬಿಣದ ಗೇಟ್‌ ಬಿದ್ದು, ಗ್ರಾಮದ ಸಿದ್ದರಾಜು ಅವರ ಪುತ್ರ ಜಿಷ್ಣು (6) ಸೋಮವಾರ ರಾತ್ರಿ ಮೃತಪಟ್ಟ.

ಎರಡನೇ ಕಾರ್ತಿಕ ಸೋಮವಾರದ ಪೂಜೆಯಾಗಿ, ಭಕ್ತರು ಮನೆಗಳಿಗೆ ತೆರಳಿದ ನಂತರ ರಾತ್ರಿ 9 ಗಂಟೆ ಸುಮಾರಿಗೆ ಬಾಲಕ ಗೇಟ್‌ ಹಿಡಿದು ಆಟವಾಡುವಾಗ ಅದು ಆತನ ಮೇಲೆ ಬಿದ್ದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಹಶೀಲ್ದಾರ್‌ ವಿರುದ್ಧ ದೂರು:

ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, 6 ತಿಂಗಳ ಹಿಂದೆ ಮುರಿದಿದ್ದ ಗೇಟ್‌ ಅನ್ನು ಸರಿಪಡಿಸಿರಲಿಲ್ಲ. ಗೋಡೆ ಪಕ್ಕ ನಿಲ್ಲಿಸಿದ್ದ ಗೇಟ್‌ ಅನ್ನು ಅಳವಡಿಸದ ಕಾರಣ ಈ ದುರಂತ ಸಂಭವಿಸಿದೆ. ತಹಶೀಲ್ದಾರ್‌, ಅರಕೆರೆ ಹೋಬಳಿಯ ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಿಗ ಮತ್ತು ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಕನ ತಂದೆ ಸಿದ್ದರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.