ಮದ್ದೂರು: ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿಗೆ ರಾಜ್ಯ ಸರ್ಕಾರದ ಆದೇಶದಂತೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಅಭಿಯಾನದಡಿ ಭಾನುವಾರ ಜಿಲ್ಲೆಯ ಹಾಗೂ ತಾಲ್ಲೂಕಿನ ಗಡಿಯಾದ ನಿಡಘಟ್ಟ ಬಳಿ ಆಗಮಿಸಿದ 'ಕನ್ನಡ ಜ್ಯೋತಿ' ರಥಯಾತ್ರೆಯನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು
‘ಕನ್ನಡ ಜ್ಯೋತಿ’ ರಥಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮಂಡ್ಯ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಎಲ್ ನಾಗರಾಜು ಬರಮಾಡಿಕೊಂಡರು.
ಬಳಿಕ ಮಾತನಾಡಿದ ‘ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಾಗಿ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
‘ನೂರಾರು ವರ್ಷಗಳ ಹಿಂದೆ ನಮ್ಮ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು ಎಂದು ಅಮೋಘ ವರ್ಷ ನೃಪತುಂಗ ತಮ್ಮ ಕಾವ್ಯಗಳಲ್ಲಿ ಬರೆದಿದ್ದರು ಅಷ್ಟೇ ಅಲ್ಲದೇ ರಾಜ ಇಮ್ಮಡಿ ಪುಲಿಕೇಶಿಯವರ ಅವಧಿಯಲ್ಲಿ ನರ್ಮದಾ ನದಿಯವರೆಗೂ ಹಬ್ಬಿತ್ತು ಎನ್ನಲಾಗಿದ್ದು, ನಮ್ಮ ರಾಜ್ಯಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ’ ಎಂದರು.
ಆ.24ರವರೆಗೆ ಕನ್ನಡ ರಥಯಾತ್ರೆಯು ಜಿಲ್ಲೆಯಲ್ಲಿ ಸಂಚರಿಸಲಿದ್ದು, ಭಾನುವಾರ ಮದ್ದೂರು ಬಳಿಕ ನಾಗಮಂಗಲ, ಪಾಂಡವಪುರ, ಕೆ. ಆರ್ ಪೇಟೆ, ಶ್ರೀರಂಗಪಟ್ಟಣ, ಮಂಡ್ಯ ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಸಂಚರಿಸಿ ನಂತರ ಚಾಮರಾಜನಗರ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದರು.
ರಥ ಯಾತ್ರೆಯಲ್ಲಿ ವೇಳೆ ವಿವಿಧ ಪೂಜಾ ಕುಣಿತ, ಜಾನಪದ ಮೇಳ ಸೇರಿದಂತೆ ಶಾಲಾ ಮಕ್ಕಳಿಂದ ಮೆರವಣಿಗೆ ಭಾಗಿಯಾಗಿದ್ದವು.
ದೇವರ ಫೋಟೊ ಹೊತ್ತು ಕುಣಿದು ಸಂಭ್ರಮಿಸಿದ ಎಡಿಸಿ
ಮದ್ದೂರು: ಜಿಲ್ಲೆಯ ಗಡಿ ಭಾಗವಾದ ತಾಲ್ಲೂಕಿನ ನಿಡಘಟ್ಟ ಬಳಿ ಕನ್ನಡ ಜ್ಯೋತಿ ರಥಯಾತ್ರೆಯು ಬಂದ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಎಲ್ ನಾಗರಾಜು ಅವರು ತಲೆಯ ಮೇಲೆ ದೇವರ ಫೋಟೊವನ್ನು ಹೊತ್ತು ಉತ್ಸಾಹದಿಂದ ಕುಣಿದು ಸಂಭ್ರಮಿಸಿದರು ಈ ವೇಳೆ ನೆರೆದಿದ್ದ ಸಾರ್ವಜನಿಕರು ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಯವರು ಚಪ್ಪಾಳೆ ಹೊಡೆದು ಖುಷಿ ಪಟ್ಟರು. ತಹಶೀಲ್ದಾರ್ ಸೋಮಶೇಖರ್ ಉಪವಿಭಾಗಾಧಿಕಾರಿ ಶಿವಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ ಹಿರಿಯ ಸಾಹಿತಿ ತೈಲೂರು ವೆಂಕಟ ಕೃಷ್ಣ ಕ.ಸಾ.ಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯಗೌರವ ಕಾರ್ಯದರ್ಶಿಗಳಾದ ಕೃಷ್ಣೆಗೌಡ ಹರ್ಷ ಪಣ್ಣೆದೊಡ್ಡಿ ಸಹಕಾರ್ಯದರ್ಶಿ ವಿ. ಸಿ. ಉಮಾ ಶಂಕರಅಪೂರ್ವ ಚಂದ್ರ ಮರಳಿಗ ಶಿವರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.