ADVERTISEMENT

ಮಾದೇಗೌಡರ ಆಶಯದಂತೆ ಗಾಂಧಿಗ್ರಾಮ ಅಭಿವೃದ್ಧಿ: ಶಾಸಕ ಸಿ.ಎಸ್‌.ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 14:03 IST
Last Updated 3 ಫೆಬ್ರುವರಿ 2023, 14:03 IST
ಎಚ್.ಮಲ್ಲಿಗೆರೆ ಫಾರಂನಲ್ಲಿರುವ ಗಾಂಧಿಗ್ರಾಮ ಅಭಿವೃದ್ಧಿ ಕಾಮಗಾರಿಕೆ ಶಾಸಕ ಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದರು. ಮಧು ಜಿ ಮಾದೇಗೌಡ, ಬಿ.ಎಂ.ನಂಜೇಗೌಡ, ಎನ್.ರಾಜು, ಅಂಜನಾ ಶ್ರೀಕಾಂತ್, ಮಾದಪ್ಪ, ನಾಗರತ್ನ ಇದ್ದರು
ಎಚ್.ಮಲ್ಲಿಗೆರೆ ಫಾರಂನಲ್ಲಿರುವ ಗಾಂಧಿಗ್ರಾಮ ಅಭಿವೃದ್ಧಿ ಕಾಮಗಾರಿಕೆ ಶಾಸಕ ಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದರು. ಮಧು ಜಿ ಮಾದೇಗೌಡ, ಬಿ.ಎಂ.ನಂಜೇಗೌಡ, ಎನ್.ರಾಜು, ಅಂಜನಾ ಶ್ರೀಕಾಂತ್, ಮಾದಪ್ಪ, ನಾಗರತ್ನ ಇದ್ದರು   

ಮಂಡ್ಯ: ‘ದಿ.ಜಿ.ಮಾದೇಗೌಡರು ಗಾಂಧಿಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಮಾದೇಗೌಡರ ಆಶಯದಂತೆ ಗಾಂಧಿಗ್ರಾಮ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಲ್ಲೂಕಿನ ಎಚ್.ಮಲ್ಲಿಗೆರೆ ಫಾರಂನಲ್ಲಿರುವ ಗಾಂಧಿಗ್ರಾಮವನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿಲ್ಲಿ ಗ್ರಾಂಧಿಗ್ರಾಮ ಅಭಿವೃದ್ಧಿಗೊಳಿಸಲಾಗುವುದು. ದಿ.ಜಿ.ಮಾದೇಗೌಡರು ಗಾಂಧಿ ಗ್ರಾಮ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಅವರ ನಂಬಿಕೆಯನ್ನು ಬಲಪಡಿಸುವಂತೆ ಗಾಂಧಿಗ್ರಾಮದ ಅಭಿವೃದ್ಧಿ ಕೆಲಸಗಳಾಗಲಿವೆ. ಸಮುದಾಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದರು.

ADVERTISEMENT

ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಧು.ಜಿ.ಮಾದೇಗೌಡ ಮಾತನಾಡಿ ‘ಮಹಾತ್ಮ ಗಾಂಧೀಜಿ ಅವರ ಚಿಂತನೆ, ಆಶಯಗಳಂತೆ ಮಾದರಿಯಾಗಿ ಗಾಂಧಿಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು, ಅದಕ್ಕೆ ಎಲ್ಲರ ಸಹಕಾರ ಪ್ರಮುಖವಾಗಿದೆ’ ಎಂದರು.

ಗ್ರಾ.ಪಂ.ಅಧ್ಯಕ್ಷೆ ಪ್ರೇಮಮ್ಮ, ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯೆ ಭಾಗಮ್ಮ, ಟ್ರಸ್ಟ್ ಪದಾಧಿಕಾರಿಗಳಾದ ಬಿ.ಎಂ.ನಂಜೇಗೌಡ, ಎನ್.ರಾಜು, ಅಂಜನಾ ಶ್ರೀಕಾಂತ್, ಮಾದಪ್ಪ, ನಾಗರತ್ನ, ಜಯರಾಮು, ಪ್ರಶಾಂತ್ ಬಾಬು, ಎಂ.ರಾಜಣ್ಣ, ರಾಮಲಿಂಗಯ್ಯ, ಎಚ್.ಮಲ್ಲಿಗೆರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.