ADVERTISEMENT

ಕೇರಳ ಲಾಟರಿ: ಮಂಡ್ಯದ ಮೆಕ್ಯಾನಿಕ್‌ಗೆ ₹25 ಕೋಟಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 13:22 IST
Last Updated 10 ಅಕ್ಟೋಬರ್ 2024, 13:22 IST
<div class="paragraphs"><p>ಅಲ್ತಾಫ್‌</p></div>

ಅಲ್ತಾಫ್‌

   

ಪಾಂಡವಪುರ (ಮಂಡ್ಯ ಜಿಲ್ಲೆ): ಪಟ್ಟಣದ ಸ್ಕೂಟರ್ ಮೆಕ್ಯಾನಿಕ್‌ ಅಲ್ತಾಫ್‌ ಎಂಬುವರಿಗೆ ಕೇರಳ ರಾಜ್ಯದ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ ಬಂದಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. 

ಪಟ್ಟಣದ ‌ಪೊಲೀಸ್ ಠಾಣೆ ರಸ್ತೆಯ ನಿವಾಸಿ ಅಲ್ತಾಫ್ ಪಾಷ ಈಚೆಗೆ ಕೇರಳಕ್ಕೆ ತೆರಳಿದ್ದ ವೇಳೆ ₹500 ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಅ.9ರಂದು ನಡೆದ ಲಾಟರಿ ಡ್ರಾನಲ್ಲಿ ಬಂಪರ್‌ ಬಹುಮಾನ ಬಂದಿದೆ. ಆದಾಯ ತೆರಿಗೆ ಮತ್ತು ಇತರ ಶುಲ್ಕಗಳು ಕಡಿತಗೊಂಡು ₹12.8 ಕೋಟಿ ಅಲ್ತಾಫ್‌ ಕೈಸೇರಲಿದೆ ಎನ್ನಲಾಗಿದೆ.

ADVERTISEMENT

ಕೇರಳದಲ್ಲಿ ಪ್ರತಿವರ್ಷ ಓಣಂ ಮತ್ತು ತಿರು ಓಣಂ ಪ್ರಯುಕ್ತ ವಿಶೇಷ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಬಹುಮಾನ ಬಂದ ವಿಷಯ ತಿಳಿಯುತ್ತಲೇ ಅಲ್ತಾಪ್‌ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ. 

‘ಲಾಟರಿಯಲ್ಲಿ ₹25 ಕೋಟಿ ಬಹುಮಾನ ಬಂದಿರುವುದು ಅತೀವ ಸಂತಸ ತಂದಿದೆ. ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ದೇವರ ದಯೆಯಿಂದ ಲಾಟರಿಯಿಂದ ಹಣ ಬಂದಿದೆ. ಈ ಹಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ನನ್ನ ಕನಸು ಈಡೇರಲಿದೆ. ಜತೆಗೆ ವಾಸಕ್ಕೊಂದು ಮನೆ, ಮಕ್ಕಳಿಗೆ ಉತ್ತಮ ಭವಿಷ್ಯ ಹಾಗೂ ಒಂದಷ್ಟು ಹಣವನ್ನು ವ್ಯವಹಾರಕ್ಕೆ ಬಳಸಿಕೊಳ್ಳುತ್ತೇನೆ. ಕೊಟ್ಟವರ ಸಾಲ ತೀರಿಸಿ, ನೆಮ್ಮದಿ ಬದುಕು ಕಟ್ಟಿಕೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.