ADVERTISEMENT

‘ಪುರಸಭೆ ನಡೆ ಸಾರ್ವಜನಿಕರ ಕಡೆ’ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 13:38 IST
Last Updated 14 ನವೆಂಬರ್ 2024, 13:38 IST
ಮಳವಳ್ಳಿ 18ನೇ ವಾರ್ಡ್‌ ರಾಮಮಂದಿರ ಬಳಿ ‘ಪುರಸಭೆ ನಡೆ ಸಾರ್ವಜನಿಕ ಕಡೆಗೆ’ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಚಾಲನೆ ನೀಡಿದರು
ಮಳವಳ್ಳಿ 18ನೇ ವಾರ್ಡ್‌ ರಾಮಮಂದಿರ ಬಳಿ ‘ಪುರಸಭೆ ನಡೆ ಸಾರ್ವಜನಿಕ ಕಡೆಗೆ’ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಚಾಲನೆ ನೀಡಿದರು   

ಮಳವಳ್ಳಿ: ‘ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪುರಸಭೆಗೆ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿರುವ ‘ಪುರಸಭೆ ನಡೆ ಸಾರ್ವಜನಿಕರ ಕಡೆಗೆ’ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಕರೆ ನೀಡಿದರು.

ಪಟ್ಟಣದ 18ನೇ ವಾರ್ಡ್‌ನ ರಾಮಮಂದಿರದಲ್ಲಿ ಗುರುವಾರ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿ ವಾರ್ಡ್‌ನಲ್ಲೂ ಮೂರು ದಿನ ಕಾರ್ಯಕ್ರಮ ನಡೆಯಲಿದ್ದು, ಜನರು ಮನೆ ಬಾಗಿಲಲ್ಲೇ ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಸ್ಥಳದಲ್ಲಿಯೇ ಇ–ಸ್ವತ್ತು, ನಕಲು, ಜನನ- ಪ್ರಮಾಣ ಪತ್ರ ನೀಡುವಿಕೆ, ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆ ಪರವಾನಗಿ, ಜಾಹೀರಾತು ಶುಲ್ಕಗಳನ್ನು ಪಾವತಿಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಸ್ಥಳದಲ್ಲಿಯೇ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ಅವಶ್ಯಕ ಪ್ರಮಾಣ ಪತ್ರಗಳನ್ನು ನೀಡಲು ಎಲ್ಲಾ ವಿಭಾಗದ ಅಧಿಕಾರಿಗಳ ಸಮೇತ ಜನರ ಬಳಿಗೆ ಹೋಗಲಾಗುತ್ತಿದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ವಾರ್ಡ್‌ಗಳಲ್ಲಿಯೇ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ. ಮಧ್ಯಾಹ್ನದ ನಂತರ ಪುರಸಭೆಯಲ್ಲಿ ಕೆಲಸ ಮುಂದುವರಿಸುತ್ತಾರೆ’ ಎಂದು ಸ್ವಷ್ಟಪಡಿಸಿದರು.

ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ವಿನೂತನವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮರ್ಪಕ ತೆರಿಗೆ ಸಂಗ್ರಹದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.

ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ ಪುರಸಭೆ ಆಡಳಿತ ಮಂಡಳಿಯ ಸಲಹೆ ಮೇರೆಗೆ ಜನರ ಮನೆ ಬಾಗಿಲಿಗೆ ಪುರಸಭೆ ಆಡಳಿತ ತೆಗೆದುಕೊಂಡು ಹೋಗಿ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನ ನಡೆಸಲಾಗುತ್ತಿದೆ. ಪುರಸಭೆಯ ಆರೋಗ್ಯ ಕಂದಾಯ ಎಂಜಿನಿಯರ್ ಸೇರಿದಂತೆ ಎಲ್ಲಾ ವಿಭಾಗದ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳುತ್ತಿರುವುದರಿಂದ ಯಾವುದೇ ಸಮಸ್ಯೆ ಇದ್ದರೂ ಕೂಡ ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು. ಮುಖಂಡ ಅಂಕನಾಥ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.