ADVERTISEMENT

ಕೆ.ಆರ್.ಪೇಟೆ: ಸಿಡಿಲು ಬಡಿದು ಮನೆಗೆ ಶಾರ್ಟ್ ಸರ್ಕ್ಯೂಟ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 12:59 IST
Last Updated 21 ಏಪ್ರಿಲ್ 2024, 12:59 IST
ಕೆ.ಆರ್. ಪೇಟೆ  ತಾಲ್ಲೂಕಿನ  ನಾಡಭೋಗನಹಳ್ಳಿ ಗ್ರಾಮದಲ್ಲಿ ಕೆಂಪಣ್ಣ ಎಂಬುಬವವರ ಸಿಡಿಲು ಬಡಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿರುವದು
ಕೆ.ಆರ್. ಪೇಟೆ  ತಾಲ್ಲೂಕಿನ  ನಾಡಭೋಗನಹಳ್ಳಿ ಗ್ರಾಮದಲ್ಲಿ ಕೆಂಪಣ್ಣ ಎಂಬುಬವವರ ಸಿಡಿಲು ಬಡಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿರುವದು   

ಕೆ.ಆರ್.ಪೇಟೆ: ತಾಲ್ಲೂಕಿನ ನಾಡಭೋಗನಹಳ್ಳಿ ಗ್ರಾಮದಲ್ಲಿ ಸಿಡಿಲಿನಿಂದ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಗ್ರಾಮದ ಕೆಂಪಣ್ಣ ಎಂಬುವವರ ಮನೆಯ ನೆಲ, ಗೋಡೆಗಳು, ಮೇಲ್ಛಾವಣಿ ಹಾನಿಯಾಗಿದ್ದು ಮನೆಯಲ್ಲಿದ್ದ ಎಂಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಡಿಲಿನ ಉಂಟಾದ ಬೆಂಕಿಗೆ ಪಕ್ಕದಲ್ಲಿದ್ದ ತೆಂಗಿನ ಮರ ಸುಟ್ಟು ಹಾನಿಯಾಗಿದೆ. ಹಲವಾರು ಮನೆಗಳ ಟಿವಿ, ಫ್ರಿಡ್ಜ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿವೆ. ‌

‘ರಾತ್ರಿ ಎಂಟು ಗಂಟೆ ಸಮಯದಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಯಲ್ಲಿ ಜೋರಾದ ಶಬ್ದ ನಮ್ಮ ಮನೆಗೆ ಅಪ್ಪಳಿಸಿತು. ನಾವು ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಕೆಲವು ನಿಮಿಷಗಳ ನಂತರ ನಮ್ಮ ಮನೆಯ ಗೋಡೆ ಬಿರುಕು ಕಾಣಿಸಿಕೊಂಡು ಸಾರ್ಟ್ ಸರ್ಕ್ಯೂಟ್ ಆಯಿತು. ತತಕ್ಷಣ ಹೊರಗೆ ಬಂದೆವು. ಪ್ರಾಣಾಪಾಯದಿಂದ ಎಂಟು ಪಾರಾದೆವು’ ಎಂದು ಕೆಂಪಣ್ಣ ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನಪ್ರತಿನಿಧಿಗಳು ಭೇಟಿ ನೀಡಿ ಕುಟುಂಬದವರನ್ನು ಸಂತೈಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.