ADVERTISEMENT

ಮದ್ದೂರು: ಹೆಬ್ಬಾವು ಸೆರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 8:19 IST
Last Updated 18 ಸೆಪ್ಟೆಂಬರ್ 2023, 8:19 IST
 ಮದ್ದೂ ಸಮೀಪದ ಶಿಂಷಾ ನದಿ ದಡದಲ್ಲಿ ಬುಧವಾರಬೃಹತ್‌ ಗಾತ್ರದ ಹೆಬ್ಬಾವು ಸೆರೆ ಸಿಕ್ಕಿದೆ.
 ಮದ್ದೂ ಸಮೀಪದ ಶಿಂಷಾ ನದಿ ದಡದಲ್ಲಿ ಬುಧವಾರಬೃಹತ್‌ ಗಾತ್ರದ ಹೆಬ್ಬಾವು ಸೆರೆ ಸಿಕ್ಕಿದೆ.   

ಮದ್ದೂರು: ಕುರಿಮಂದೆಯನ್ನು ಗಮನಿಸಿದ ಹೆಬ್ಬಾವೊಂದು ಕುರಿ ಮರಿಯನ್ನು ತಿನ್ನಲು ಬಂದಾಗ ಉರಗತಗಜ್ಞರ ಸಹಾಯದಿಂದ ಸೇರಿಹಿಡಿಯಲಾಗಿರುವ ಘಟನೆ ಮದ್ದೂರು ಬಳಿಯ ಶಿಂಷಾ ನದಿಯ ದಡದ ಬಳಿ ಬುಧವಾರ ನಡೆದಿದೆ.

ಪಟ್ಟಣದ ಶಿವಪುರದ ಶಿಂಷಾ ನದಿ ಸಮೀಪ ಚಾಮನಹಳ್ಳಿ ಗ್ರಾಮದ ತಗಡಯ್ಯ ಎಂಬುವವರು ಬುಧವಾರ ಸಂಜೆ 20 ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸುಮಾರು 14 ಅಡಿ ಉದ್ದ, 45 ಕೆಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಕುರಿ ಮಂದೆಯ ಮೇಲೆ ಅಟ್ಯಾಕ್ ಮಾಡಿ ಕುರಿ ಮರಿ ನುಂಗಲು ಯತ್ನಿಸುತ್ತಿದ್ದ ವೇಳೆ ಇದನ್ನು ಗಮನಿಸಿದ ಮಾಲೀಕ ತಗಡಯ್ಯ ಕುರಿ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಾಡಿದ್ದಾರೆ.

ಜನರ ಕಿರುಚಾಟಕ್ಕೆ ಬೆದರಿದ ಹೆಬ್ಬಾವು ಅಲ್ಲೆ ಪಕ್ಕದಲ್ಲಿದ್ದ ಬೇಲಿಗೆ ಸೇರಿ ಅವಿತುಕೊಂಡಿದೆ. ಕೂಡಲೇ ಸ್ಥಳೀಯರು ಛಾಯಾಗ್ರಾಹಕ ಮತ್ತು ಉರಗ ತಜ್ಞ ಚಾಮನಹಳ್ಳಿ ರವಿ ಅವರಿಗೆ ಸುದ್ದಿ ಮುಟ್ಟಿಸಿ ಸ್ಥಳಕ್ಕೆ ಕರೆಸಿದ್ದಾರೆ.

ADVERTISEMENT

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರವಿ ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದು ಹೊರ ತಂದರು. ಈ ಸಂದರ್ಭದಲ್ಲಿ ಸ್ಥಳೀಯರು ಹೆಬ್ಬಾವು ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಬಳಿಕ ಶಿಂಷಾ ನದಿಯ ದಡದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.