ಶ್ರೀರಂಗಪಟ್ಟಣ: ಮಹಾ ಶಿವರಾತ್ರಿಯ ನಿಮಿತ್ತ ಪಟ್ಟಣದ ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆದವು.
ಪಟ್ಟಣದ ಜ್ಯೋತಿರ್ ಮಹೇಶ್ವರ, ಕಾಳಿಕಾಂಬ ಕಮಠೇಶ್ವರ, ಗೋವಿಂದಪ್ಪ ಬೀದಿಯ ಮಹದೇಶ್ವರ, ಜಿ.ಬಿ.ಗೇಟ್ ಬಳಿಯ ಕಾವೇರಿ ಚಂದ್ರಮೌಳೇಶ್ವರ, ಉತ್ತರಾದಿ ಮಠ ರಸ್ತೆಯಲ್ಲಿರುವ ರಾಮಲಿಂಗೇಶ್ವರ ದೇವಾಲಯಗಳಲ್ಲಿ ಶನಿವಾರ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು.
ಪಟ್ಟಣ ಸಮೀಪದ ಗಂಜಾಂನ ದೊಡ್ಡ ಗೋಸಾಯಿಘಾಟ್ ಬಳಿಯ ಕಾಶಿ ಚಂದ್ರಮೌಳೇಶ್ವರ, ಪಟ್ಟಣ ಸಮೀಪ ಚಂದ್ರವನ ಆಶ್ರಮದ ಕಾಶಿ ಚಂದ್ರಮೌಳೇಶ್ವರ, ಪಾಲಹಳ್ಳಿಯ ಪಶುಪತೇಶ್ವರ, ಮೇಳಾಪುರದ ಹೆಗಡೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
ತಾಲ್ಲೂಕಿನ ಮಂಡ್ಯಕೊಪ್ಪಲು ಸಮೀಪದ ಕಾವೇರಿ ಬೋರೇದೇವರ ದೇವಾಲಯಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಮಹದೇವಪುರದ ಐತಿಹಾಸಿಕ ಕಾಶಿ ವಿಶ್ವನಾಥ, ಕೂಡಲಕುಪ್ಪೆಯ ಶ್ರೀ ಶಕ್ತಿ ಶನೇಶ್ವರ ದೇವಾಲಯ, ಬಾಬುರಾಯನಕೊಪ್ಪಲಿನ ಮಣಿಕರ್ಣಿಕಾ ಕಾಶಿ ವಿಶ್ವನಾಥ, ಹೊಸ ಆನಂದೂರಿನ ಅರಕೇಶ್ವರ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.