ADVERTISEMENT

ಮಂಡ್ಯ ನಗರಸಭೆಯ ಅಧಿಕಾರ ಗದ್ದುಗೆ ಏರಲು ತೀವ್ರ ಪೈಪೋಟಿ: ಅಖಾಡಕ್ಕೆ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 7:16 IST
Last Updated 28 ಆಗಸ್ಟ್ 2024, 7:16 IST
<div class="paragraphs"><p>ಮಂಡ್ಯ ನಗರಸಭೆ ಚುನಾವಣೆಗೆ ಬುಧವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಾಳತ್ವದಲ್ಲಿ ನಗರಸಭೆಯ 18 ಜೆಡಿಎಸ್ ಸದಸ್ಯರು ಆಗಮಿಸಿದರು</p></div>

ಮಂಡ್ಯ ನಗರಸಭೆ ಚುನಾವಣೆಗೆ ಬುಧವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಾಳತ್ವದಲ್ಲಿ ನಗರಸಭೆಯ 18 ಜೆಡಿಎಸ್ ಸದಸ್ಯರು ಆಗಮಿಸಿದರು

   

ಮಂಡ್ಯ: ನಗರಸಭೆಯ ಅಧಿಕಾರವನ್ನು ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮಂಡ್ಯ ನಗರಸಭೆಯಲ್ಲಿ ಬುಧವಾರ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ.

ADVERTISEMENT

ನಗರಸಭೆಯಲ್ಲಿ ಪ್ರಸ್ತುತ ಜೆಡಿಎಸ್ 18, ಕಾಂಗ್ರೆಸ್ 10, ಪಕ್ಷೇತರರು- 5, ಬಿಜೆಪಿಯ 2 ಸದಸ್ಯರು ಸೇರಿದಂತೆ ಒಟ್ಟು 35 ಸದಸ್ಯರು ಇದ್ದಾರೆ.

ಜೊತೆಗೆ ಸಂಸದ ಕುಮಾರಸ್ವಾಮಿ ಅವರ ಒಂದು ಮತ ಹಾಗೂ ಶಾಸಕ ಪಿ.ರವಿಕುಮಾರ್ ಅವರ ಒಂದು ಮತ ಸೇರಿ ಒಟ್ಟು 37 ಮತಗಳು ಚಲಾವಣೆಯಾಗಬೇಕಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್ ಮಂಜು ಹಾಗೂ ಜೆಡಿಎಸ್ ನಿಂದ ನಾಗೇಶ್ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಜಾಕಿರ್ ಮತ್ತು ಜೆಡಿಎಸ್ ನಿಂದ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಎರಡೂ ಬಣದವರು ಪ್ರತ್ಯೇಕ ವಾಹನಗಳಲ್ಲಿ ನಗರಸಭೆ ಆವರಣಕ್ಕೆ ಬಂದ ಸಂದರ್ಭ ತೀವ್ರ ನೂಕುನುಗ್ಗಲು ಉಂಟಾಯಿತು.

ಕಾಂಗ್ರೆಸ್ ಸದಸ್ಯರ ವಾಹನವನ್ನು ಶಾಸಕ ರವಿಕುಮಾರ್ ಅವರ ನೇತೃತ್ವದಲ್ಲಿ ಆವರಣದೊಳಕ್ಕೆ ಕರೆತರಲಾಯಿತು.

ನಂತರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಆಗಮಿಸಿದರು. ಅವರ ಹಿಂದೆಯೇ ಬರುತ್ತಿದ್ದ ಜೆಡಿಎಸ್ ಸದಸ್ಯರ ವಾಹನವನ್ನು ಗೇಟಿನ ಬಳಿ ತಡೆ ಹಿಡಿಯಲಾಯಿತು.

ಇದರಿಂದ ಕೆಲಕಾಲ ಪೊಲೀಸರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಗ್ವಾದ ಮತ್ತು ನೂಕುನುಗ್ಗಲು ಉಂಟಾಯಿತು.

ಇದರಿಂದ ಬೇಸತ್ತ ಕುಮಾರಸ್ವಾಮಿ ಸ್ವತಃ ಗೇಟಿನ ಬಳಿ ತೆರಳಿ ಸದಸ್ಯರ ವಾಹನವನ್ನು ಪೊಲೀಸರ ಭದ್ರತೆಯಲ್ಲಿ ಆವರಣದೊಳಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು.

ಈ ಮಧ್ಯೆ ಶಾಸಕ ರವಿಕುಮಾರ್ ಅವರು ಜೆಡಿಎಸ್ ಸದಸ್ಯರ ಬಳಿಗೆ ಅವರ ಪೋಷಕರನ್ನು ಮಾತನಾಡಿಸಲು ಬಿಡುವಂತೆ ಆಗ್ರಹಿಸಿದರು.

ಇದಕ್ಕೆ ಅವಕಾಶ ನೀಡದ ಪೊಲೀಸರು ಜೆಡಿಎಸ್ ಸದಸ್ಯರನ್ನು ನಗರಸಭೆಯ ಸಭಾಂಗಣದೊಳಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.

ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.