ADVERTISEMENT

ಮಂಡ್ಯ| ಕಿಕ್ಕೇರಿಯಲ್ಲಿ ರೋಗಗ್ರಸ್ತ ನಾಯಿ ಕಾಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 15:24 IST
Last Updated 18 ಜೂನ್ 2023, 15:24 IST
ಕಿಕ್ಕೇರಿಯಲ್ಲಿ ಕಜ್ಜಿ, ವಯೋವೃದ್ಧ ನಾಯಿಗಳ ಕಾಟದಿಂದ ಸಾರ್ವಜನಿಕರು ದಿಗಿಲುಪಡುವಂತಾಗಿರುವುದು
ಕಿಕ್ಕೇರಿಯಲ್ಲಿ ಕಜ್ಜಿ, ವಯೋವೃದ್ಧ ನಾಯಿಗಳ ಕಾಟದಿಂದ ಸಾರ್ವಜನಿಕರು ದಿಗಿಲುಪಡುವಂತಾಗಿರುವುದು   

ಕಿಕ್ಕೇರಿ: ಪ್ರದೇಶದಲ್ಲಿ ವಯಸ್ಸಾದ, ಕಜ್ಜಿ ಹಾಗೂ ರೋಗಗ್ರಸ್ತ ನಾಯಿಗಳ ಕಾಟ ಹೆಚ್ಚಾಗಿದ್ದು, ಇವುಗಳ ಉಪಟಳಕ್ಕೆ ಗ್ರಾಮೀಣರು, ಪ್ರಯಾಣಿಕರು, ಮಕ್ಕಳು ಓಡಾಡಲು ದಿಗಿಲುಪಡುವಂತಾಗಿದೆ.

ಪಟ್ಟಣಕ್ಕೆ ಸಂತೆಗಾಗಿ ಬರುವ ರೈತರೊಂದಿಗೆ ಸಾಕಷ್ಟು ನಾಯಿಗಳು ಬಂದು, ಬಹುತೇಕ ಪಟ್ಟಣದಲ್ಲಿಯೇ ಬೀಡುಬಿಟ್ಟಿವೆ. ಇದರ ಜೊತೆಗೆ ರೋಗಗ್ರಸ್ತ ನಾಯಿಗಳ ಕಾಟ ಹೆಚ್ಚಿದೆ. ನೋಡಲು ಭಯಂಕರವಾಗಿ ಕಾಣುವ ನಾಯಿಗಳು ಹಲವು ಮನೆಗಳಿಗೆ ನುಗ್ಗುತ್ತಿವೆ. ಮನೆಯ ಬಾಗಿಲು ಮುಚ್ಚದೆ ತೆರೆದಿದ್ದರೆ ಸಲೀಸಾಗಿ ಮನೆಯೊಳಗೆ ಸೇರಿದ ನಿದರ್ಶನ ಸಾಕಷ್ಟಿದೆ.

ಇಂತಹ ನಾಯಿಗಳ ಉಪಟಳವನ್ನು ನಿಯಂತ್ರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಮೌನವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಪಟ್ಟಣ ಇರುವುದರಿಂದ, ಶಾಲೆ, ಕಾಲೇಜು ಮಕ್ಕಳು ಸುಲಲಿತವಾಗಿ ಓಡಾಡಲು ನಾಯಿಗಳ ಉಪಟಳವನ್ನು ನಿಯಂತ್ರಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ADVERTISEMENT

ಹೋಬಳಿಗೆ ಬರಲು ನಿಜಕ್ಕೂ ಭಯ. ಬೆಳಿಗ್ಗೆ  ಹಳ್ಳಿಗಳಿಂದ ಪಟ್ಟಣಕ್ಕೆ ಬರಲು ಜೀವ ಭಯ. ಪ್ರಾಣಿದಯಾ ಸಂಸ್ಥೆ  ಇಂತಹ ನಾಯಿಗಳನ್ನು ಸ್ವಯಂಪ್ರೇರಣೆಯಿಂದ ಹಿಡಿದು ಸಾಕುವ ವ್ಯವಸ್ಥೆ ಮಾಡಿದರೆ ಬಹಳ ಉಪಯೋಗವಾಗಲಿದೆ ಎಂದು .
ಸ್ವಯಂಸೇವಕ ಗುರುಮೂರ್ತಿ ಬವಣೆ ವಿವರಿಸಿದರು.

ನಾಯಿಗಳ ನಿಯಂತ್ರಣಕ್ಕೆ ಕಾನೂನು ರೀತ್ಯ ಕ್ರಮ ಕೈಗೊಂಡಿದ್ದೆವು. ಆದರೆ, ಹಲವರು ಅಡ್ಡಿಪಡಿಸಿದ್ದರಿಂದ ನಾಯಿ ಹಿಡಿಯಲು ಬಂದವರು ಹಾಗೆಯೇ ವಾಪಸ್‌ ಹೋಗಿದ್ದಾರೆ. ಕಜ್ಜಿ, ವಯಸ್ಸಾದ ನಾಯಿಗಳ ನಿಯಂತ್ರಣಕ್ಕೆ ಕಾನೂನು ಸಲಹೆ ಪಡೆದು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು  ಕಿಕ್ಕೇರಿ ಗ್ರಾಮ ಪಂಚಾಯಿತಿ ಪಿಡಿ‌ಒ ಚಲುವರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.