ADVERTISEMENT

ಹಲವು ಬಾರಿ ಸೀಟ್‌ ಬೆಲ್ಟ್‌ ಧರಿಸದಿದ್ದಕ್ಕೆ ಮಂಡ್ಯದ ಚಾಲಕನಿಗೆ ₹18 ಸಾವಿರ ದಂಡ!

ಸೀಟ್‌ ಬೆಲ್ಟ್‌ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್‌ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ ₹18 ಸಾವಿರ ದಂಡ ವಿಧಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 13:03 IST
Last Updated 19 ನವೆಂಬರ್ 2024, 13:03 IST
<div class="paragraphs"><p>ಸೀಟ್‌ ಬೆಲ್ಟ್‌ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್‌ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ ₹18 ಸಾವಿರ ದಂಡ ವಿಧಿಸಿದ್ದಾರೆ. </p></div>

ಸೀಟ್‌ ಬೆಲ್ಟ್‌ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್‌ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ ₹18 ಸಾವಿರ ದಂಡ ವಿಧಿಸಿದ್ದಾರೆ.

   

ಮಂಡ್ಯ: ಸೀಟ್‌ ಬೆಲ್ಟ್‌ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್‌ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ ₹18 ಸಾವಿರ ದಂಡ ವಿಧಿಸಿದ್ದಾರೆ.

ಮೈಸೂರು ನಗರದ ನೋಂದಣಿ ಹೊಂದಿದ್ದ ಗೂಡ್ಸ್‌ ವಾಹನದಲ್ಲಿ ಗ್ಯಾಸ್‌ ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಚಾಲಕ ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಸೀಟ್‌ ಬೆಲ್ಟ್‌ ಧರಿಸದೇ ಇರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ADVERTISEMENT

‘ಒಂದು ಬಾರಿಯ ಉಲ್ಲಂಘನೆಗೆ ₹500ರಂತೆ, 36 ಬಾರಿ ಉಲ್ಲಂಘನೆಗೆ ₹18 ಸಾವಿರ ದಂಡ ಹಾಕಿದ್ದೇವೆ. ಚಾಲಕ ಮಂಗಳವಾರ ದಂಡ ಪಾವತಿಸಿ ರಸೀದಿ ಪಡೆದಿದ್ದಾನೆ. ದಂಡ ತೆತ್ತ ಚಾಲಕನಿಗೆ ಸಂಚಾರ ಪೊಲೀಸರು ಎಚ್ಚರಿಕೆ ನೀಡಿ, ಸಂಚಾರ ನಿಯಮ ಪಾಲಿಸುವಂತೆ ತಿಳಿವಳಿಕೆ ನೀಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.