ADVERTISEMENT

ಮದ್ದೂರು | ಸಿಡಿ ಆಡಿಸಿ ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:24 IST
Last Updated 2 ಮೇ 2024, 15:24 IST
ಮದ್ದೂರಿನ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಹಬ್ಬದ ಪ್ರಯುಕ್ತ ಗುರುವಾರ ಸಿಡಿ ಉತ್ಸವ ನೆರವೇರಿತು
ಮದ್ದೂರಿನ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಹಬ್ಬದ ಪ್ರಯುಕ್ತ ಗುರುವಾರ ಸಿಡಿ ಉತ್ಸವ ನೆರವೇರಿತು   

ಮದ್ದೂರು: ಪಟ್ಟಣದ ಗ್ರಾಮದೇವತೆ ಮದ್ದೂರಮ್ಮನವರ ಜಾತ್ರಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಿಡಿ ಉತ್ಸವವು ಅಪಾರ ಭಕ್ತರ ಜಯಘೋಷಗಳ ನಡುವೆ ನೆರವೇರಿತು.

ಸಂಜೆ 4 ಗಂಟೆಗೆ ಮಠ ಮನೆಯಿಂದ ಭಕ್ತರು ಬಾಯಿ ಬೀಗ ಸಮೇತ ಹೊರಟ ನಂತರ ಸಿಡಿರಣ್ಣನವರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಕ್ಕಳಾಗಲೆಂದು ಹರಕೆ ಹೊತ್ತವರು ತಮ್ಮ ಚಿಕ್ಕ ಮಕ್ಕಳನ್ನು ಸಿಡಿರಣ್ಣನ ಜೊತೆಯಲ್ಲಿ ಸಿಡಿ ಆಡಿಸಿ ಹರಕೆ ತೀರಿಸಿದರು. ಈ ವೇಳೆ ಸಿಡಿರಣ್ಣನಿಗೆ ಹಣ್ಣು ಜವನ  ಎಸೆದು ಸಂಭ್ರಮಿಸಿದರು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಪಟ್ಟಣದ ಮಠ ಮನೆಯಿಂದ ಸಿಡಿರಣ್ಣನ ಮೆರವಣಿಗೆ ನಡೆಯಿತು. ಈ ವೇಳೆ  ಹೆದ್ದಾರಿಯಲ್ಲಿ ಜನರು ಹಾಗೂ ವಾಹನ ಸಂಚಾರ ಹೆಚ್ಚಿತ್ತು, ಟ್ರಾಫಿಕ್‌ ನಿಯಂತ್ರಿಸಲು ಸಂಚಾರ ಪೊಲೀಸ ಹರಸಾಹಸ ಪಟ್ಟರು.

ADVERTISEMENT

ಮೇ 3ರಂದು ಓಕಳಿ ಸೇವೆ ಸಂಜೆ 4 ಗಂಟೆಗೆ ನಡೆಯಲಿದೆ.  ಸಂಜೆ 6.30 ಗಂಟೆಗೆ ಉಯ್ಯಾಲೆ ಉತ್ಸವ, ರಾತ್ರಿ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಮೇ 4ರಂದು ಶನಿವಾರ ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 9 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಯೊಂದಿಗೆ ಮಠ ಮನೆ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಮದ್ದೂರಿನ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಹಬ್ಬದ ಪ್ರಯುಕ್ತ ಗುರುವಾರ ಸಿಡಿ ಉತ್ಸವ ನೆರವೇರಿತು
ಮದ್ದೂರಿನ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಹಬ್ಬದ ಪ್ರಯುಕ್ತ ಗುರುವಾರ ಸಿಡಿ ಉತ್ಸವ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.