ADVERTISEMENT

ಕೊಚ್ಚಿಹೋದ ರಸ್ತೆ ದುರಸ್ತಿಗೆ ಶಾಸಕ ಮಂಜು ಸೂಚನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 13:50 IST
Last Updated 10 ನವೆಂಬರ್ 2024, 13:50 IST
ಸಂತೇಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಬಳಿ ಶಾಸಕ ಎಚ್.ಟಿ. ಮಂಜು ಅವರು ಅಧಿಕಾರಿಗಳೊಂದಿಗೆ ಕೊಚ್ಚಿ ಹೋಗಿರುವ ರಸ್ತೆ ವೀಕ್ಷಿಸಿದರು
ಸಂತೇಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಬಳಿ ಶಾಸಕ ಎಚ್.ಟಿ. ಮಂಜು ಅವರು ಅಧಿಕಾರಿಗಳೊಂದಿಗೆ ಕೊಚ್ಚಿ ಹೋಗಿರುವ ರಸ್ತೆ ವೀಕ್ಷಿಸಿದರು   

ಸಂತೇಬಾಚಹಳ್ಳಿ: ‘ಕೊಚ್ಚಿಹೋದ ರಸ್ತೆ ದುರಸ್ತಿ ಮಾಡಬೇಕೆಂದು ಸಣ್ಣ ನೀರಾವರಿ ಅಧಿಕಾರಿಗಳಿಗೆ’ ಶಾಸಕ ಎಚ್.ಟಿ.ಮಂಜು ಸೂಚಿಸಿದರು.

‘ಇಲ್ಲಿನ ನಾಗರಘಟ್ಟ ಹಾಗೂ ಹಲಸನಹಳ್ಳಿ ಮಾರ್ಗ ಮಧ್ಯ ಸೇತುವೆ ಬಳಿ ರಸ್ತೆ ಕೊಚ್ಚಿಹೋಗಿ ಮೂರು ವರ್ಷವಾಗಿದ್ದರೂ ದುರಸ್ತಿ ಮಾಡದ’ ಸಣ್ಣ ನೀರಾವರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶ್ರವಣಬೆಳಗೊಳ, ನಾಗರಘಟ್ಟ ಸೇರಿ ವಿವಿಧ ಗ್ರಾಮಗಳಿಗೆ ತೆರಳಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸೂಚನೆ ನೀಡಿದ್ದರು ಕಾಮಗಾರಿ ಆರಂಭ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಶೀಘ್ರದಲ್ಲಿ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ನಿರ್ಮಲೇಶ್ ಅವರಿಗೆ ನಿರ್ದೇಶನ ನೀಡಿದರು.

ತಹಶೀಲ್ದಾರ್ ಅಶೋಕ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಂಜುನಾಥ್, ಶ್ರೀನಿವಾಸ್, ಸಣ್ಣ ನೀರಾವರಿ ಎಂಜಿನಿಯರ್ ನಿರ್ಮಲೇಶ್, ತೋಟಗಾರಿಕೆ ಉಪ ನಿರ್ದೇಶಕ ಲೋಕೇಶ್, ಕೃಷಿ ಅಧಿಕಾರಿ ಅಭಿಷೇಕ್, ಮುಖಂಡ ಜಾನಕಿರಾಮ್, ರವಿಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಅರಳಕುಪ್ಪೆ ಪ್ರತಾಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.