ADVERTISEMENT

ಕೆ.ಆರ್.ಪೇಟೆ: ಶಾಸಕರಿಂದ ಅಧಿಕಾರಿಗಳಿಗೆ ತರಾಟೆಗೆ

ಹಣ ಬಿಡುಗಡೆಯಾದರೂ ಪೂರ್ಣಗೊಳ್ಳದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:51 IST
Last Updated 22 ಜೂನ್ 2024, 13:51 IST
ಕೆ.ಆರ್.ಪೇಟೆ ತಾಲ್ಲೂಕಿನ ಶ್ರವಣಬೆಳಗೊಳ ರಸ್ತೆಯಲ್ಲಿ ಬರುವ ಚಿಕ್ಕೋಸಹಳ್ಳಿ ಗ್ರಾಮದ ಬಳಿ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ಶ್ರವಣಬೆಳಗೊಳ ರಸ್ತೆಯಲ್ಲಿ ಬರುವ ಚಿಕ್ಕೋಸಹಳ್ಳಿ ಗ್ರಾಮದ ಬಳಿ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು   

ಕೆ.ಆರ್.ಪೇಟೆ: ಪಟ್ಟಣದಿಂದ ಚಿಕ್ಕೊಸಹಳ್ಳಿಗೆ ಹೋಗುವ ಶ್ರವಣಬೆಳಗೊಳ ರಸ್ತೆಯ ಒಂದೂವರೆ ಕಿ.ಮೀ ರಸ್ತೆ ಕಾಮಗಾರಿಗೆ ಎರಡು ವರ್ಷದ ಹಿಂದೆ ಅನುದಾನ ಬಿಡುಗಡೆಯಾಗಿದ್ದರೂ ಲೋಕೋಪಯೋಗಿ ಇಲಾಖೆ ಕಾಮಗಾರಿ ನಡೆಸದಿರುವ ಬಗ್ಗೆ ಗ್ರಾಮಸ್ಥರ ದೂರಿದ್ದರಿಂದ ಶಾಸಕ ಎಚ್.ಟಿ.ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶ್ರವಣಬೆಳಗೊಳ ರಸ್ತೆಯಲ್ಲಿ ಕೆರೆ ಬಳಿಯಿಂದ 60 ಅಡಿ ಅಗಲದ ಒಂದೂ ಕಾಲು ಕಿ.ಮೀ ಉದ್ದದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ₹ 6 ಕೋಟಿ  ಹಾಗೂ ರಸ್ತೆ ವಿಸ್ತರಣೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ₹ 3.79 ಕೋಟಿ ಅನುದಾನವು ಹಿಂದಿನ ಸರ್ಕಾರದಲ್ಲಿಯೇ ಬಿಡಗಡೆಯಾಗಿದೆ. ಆದರೆ ಸರಪಳಿ 08.10 ರಿಂದ ಆರಂಭಿಸಬೇಕಾಗಿದ್ದ ಕಾಮಗಾರಿಯನ್ನು ಕೆ.ಆರ್.ಪೇಟೆ ಪಟ್ಟಣದಿಂದ ಸರಪಳಿ 05.8 ರಿಂದ ಕಾಮಗಾರಿ ಆರಂಭಿಸಿ 250 ಮೀಟರ್ ಮಾಡಿ ನಂತರ ಕಾಮಗಾರಿ ಮಾಡದೆ ಇರುವದರಿಂದ ಈ ಮಾರ್ಗದಲ್ಲಿ ಗುಂಡಿ-ಕೊರಕಲು ಉಂಟಾಗಿದ್ದು, ವಾಹನಗಳು ಓಡಾಡಲು ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು.

ರಸ್ತೆಯ ದುಸ್ಥಿತಿ ಗಮನಿಸಿದ ಶಾಸಕ ಮಂಜು ‘ಎಸ್ಟಿಮೇಟ್‌ನಂತೆ ಕಾಮಗಾರಿ ಆರಂಭಿಸದಿರುವುದ ಏಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ,ಈ ಹಿಂದೆ ಇದೇ ರಸ್ತೆಯಲ್ಲಿ ಬಸ್ ಉರುಳಿ 6 ಜನ ಮೃತಪಟ್ಟಿದ್ದಾರೆ. ಆದ್ದರಿಂದ ಅಧಿಕಾರಿಗಳು ಎಚ್ಚೆತ್ತು ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ’ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜು, ಸಹಾಯಕ ಕಾರ್ಯಪಾಲಕ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.