ADVERTISEMENT

‘ಅಶ್ವಮೇಧ’ ಬಸ್‌ಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 3:59 IST
Last Updated 27 ಅಕ್ಟೋಬರ್ 2024, 3:59 IST
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಮೂರು ಹೊಸ ಬಸ್ ಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ಚಿಕ್ಕಲಿಂಗಯ್ಯ, ನಾಗರಾಜು, ಮಧುಸೂದನ್, ದೊಡ್ಡಯ್ಯ ಇದ್ದಾರೆ.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಮೂರು ಹೊಸ ಬಸ್ ಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ಚಿಕ್ಕಲಿಂಗಯ್ಯ, ನಾಗರಾಜು, ಮಧುಸೂದನ್, ದೊಡ್ಡಯ್ಯ ಇದ್ದಾರೆ.   

ಮಳವಳ್ಳಿ: ಪಟ್ಟಣದ ವಿವಿಧ ಮಾರ್ಗಗಳಲ್ಲಿ ಆರು ತಿಂಗಳಿಂದ 24 ಹೊಸ ಬಸ್‌ಗಳು ಸಂಚರಿಸುತ್ತಿವೆ.  ಮತ್ತಷ್ಟು ಬಸ್‌ಗಳು ಸಾರ್ವಜನಿಕರ ಸೇವೆ ಲಭ್ಯವಾಗಲಿವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಮೂರು ಹೊಸ ‘ಅಶ್ವಮೇಧ’ ಬಸ್ ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ‘ಶಕ್ತಿ’ಯೋಜನೆ ಜಾರಿಯಾದ ಬೇಡಿಕೆಗಳಿಗೆ ತಕ್ಕಂತೆ ಹೊಸ ಬಸ್ ಗಳನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗಾಗಿ 18 ಹೊಸ ಮಾರ್ಗಗಳಲ್ಲಿ ಬಸ್ ಸೌಲಭ್ಯ ಒದಗಿಸಲಾಗಿದೆ. ಸಂಚಾರ ದಟ್ಟಣೆಯ ಸಮಯದಲ್ಲಿ ಜನರಿಗೆ  ಬೆಂಗಳೂರು, ಮೈಸೂರು, ಮಂಡ್ಯಕ್ಕೆ ತೆರಳಲು ಹೆಚ್ಚುವರಿ ಬಸ್‌ಗಳನ್ನು ಮಳವಳ್ಳಿಯಿಂದ ಬಿಡಲಾಗಿದೆ.ವಿಶೇಷ ಜಾತ್ರಾ ಮಹೋತ್ಸವ ಸಂದರ್ಭದಲ್ಲೂ ಬಸ್‌ ನೀಡಲಾಗಿದೆ ಎಂದರು. ಎಲ್ಲ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವ ಭರವಸೆ ನೀಡಿದರು.

ADVERTISEMENT

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಮಳವಳ್ಳಿ ಘಟಕದ ವ್ಯವಸ್ಥಾಪಕ ಮಧುಸೂದನ್, ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ,  ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ, ಮುಖಂಡರಾದ ಆರ್.ಎನ್.ವಿಶ್ವಾಸ್, ಕೆ.ಜೆ.ದೇವರಾಜು, ಸಿ.ಮಾಧು, ಬಾಲಕೃಷ್ಣ, ಗಂಗರಾಜೇ ಅರಸು, ರೋಹಿತ್ ಗೌಡ(ದೀಪು), ಬಸವರಾಜು, ನಂಜುಂಡಸ್ವಾಮಿ, ಕಿರಣ್ ಶಂಕರ್, ವೆಂಕಟೇಶ್, ಚೇತನ್ ನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.