ADVERTISEMENT

ಮದ್ದೂರು: ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಶುಲ್ಕ ಪಾವತಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 14:31 IST
Last Updated 29 ಜುಲೈ 2023, 14:31 IST
ಮದ್ದೂರು ಪಟ್ಟಣದ ಸರ್ಕಾರಿ ಪ್ರಾಢಶಾಲೆಯಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿಸುವ ಕಾರ್ಯಕ್ರಮಕ್ಕೆ ಶಾಸಕ ಉದಯ್ ಚಾಲನೆ ನೀಡಿದರು. ಬಿಇಒ ಕಾಳೀರಯ್ಯ, ಪ್ರಾಂಶುಪಾಲೆ ಗೀತಾ, ಸುಕನ್ಯಾ, ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು ಇದ್ದರು
ಮದ್ದೂರು ಪಟ್ಟಣದ ಸರ್ಕಾರಿ ಪ್ರಾಢಶಾಲೆಯಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿಸುವ ಕಾರ್ಯಕ್ರಮಕ್ಕೆ ಶಾಸಕ ಉದಯ್ ಚಾಲನೆ ನೀಡಿದರು. ಬಿಇಒ ಕಾಳೀರಯ್ಯ, ಪ್ರಾಂಶುಪಾಲೆ ಗೀತಾ, ಸುಕನ್ಯಾ, ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು ಇದ್ದರು   

ಮದ್ದೂರು: ಪಟ್ಟಣದ ಸರ್ಕಾರಿ ಪ್ರಾಢಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸುವ ಕಾರ್ಯಕ್ರಮಕ್ಕೆ ಶಾಸಕ ಉದಯ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ತಾಲ್ಲೂಕಿನ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ನಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಪಾವತಿಸಲಾಗುತ್ತಿದೆ.ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ’ ಎಂದರು.

ತಾಲ್ಲೂಕಿನ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಸಚಿವರೊಂದಿಗೆ ಚರ್ಚಿಸಲಾಗಿದೆ. ಶಾಲೆಗಳಲ್ಲಿರುವ ಶೌಚಗೃಹ, ಕಟ್ಟಡ ಹಾಗೂ ಮೈದಾನ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನ ಹಂತ ಹಂತವಾಗಿ ಬಗೆ ಹರಿಸಲಾಗುವುದು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಲವಾರು ಸಮಸ್ಯೆಗಳಿದ್ದು, ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ವಾಯವಿಹಾರ ಮಾಡಲು ಅನುಕೂಲವಾಗುವಂತೆ ಹೈಟೆಕ್ ಕ್ರೀಡಾಂಗಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಅದ್ವೀತಿಯ ಸಾಧನೆ ಮಾಡುವ ಮೂಲಕ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತರಬೇಕು’ ಎಂದು ಕಿವಿ ಮಾತು ಹೇಳಿದರು.

ತಾಲ್ಲೂಕು ಶಿಕ್ಷಣಾಧಿಕಾರಿ ಕಾಳೀರಯ್ಯ ಮಾತನಾಡಿ, ಶಾಸಕರಾದ ಕೆ.ಎಂ.ಉದಯ್ ಅವರು ಸರ್ಕಾರಿ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳ ಶುಲ್ಕವನ್ನು ವೈಯಕ್ತಿಕವಾಗಿ ಕಟ್ಟುವ ಮೂಲಕ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಗೀತಾ, ಉಪ ಪ್ರಾಂಶುಪಾಲರಾದ ಸುಕನ್ಯ, ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು, ಮುಖಂಡರಾದ ಶೇಖರ್, ಕೃಷ್ಣಪ್ಪ, ಶಿಕ್ಷಕರಾದ ನಿಂಗರಾಜು, ಮೋಹನ್, ಸುನಿತ, ಶೋಭಾ, ಶೈಲಜಾ, ಸಾವಿತ್ರಿ, ಶಿಲ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.