ಮಹಮ್ಮದ್ ಕಲೀಮುಲ್ಲಾ ನಿವೃತ್ತ ಶಿಕ್ಷಕರು. ಐತಿಹಾಸಿಕ ವೈಭವ ಸಾರುವ ದೇಗುಲಗಳು ಶಿಥಿಲಾವಸ್ಥೆಯಲ್ಲಿದ್ದರೆ ಇವರಿಗೆ ಸಹಿಸಲಸಾಧ್ಯ. ಅವುಗಳ ಜೀರ್ಣೋದ್ಧಾರ ಆಗುವವರೆಗೆ ಇವರು ವಿರಮಿಸುವುದಿಲ್ಲ. ಅದರಲ್ಲಿಯೂ, ತಮ್ಮೂರು ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತ–ಮುತ್ತ ಇರುವ ಐತಿಹಾಸಿಕ ದೇಗುಲಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಧರ್ಮಸ್ಥಳ ಸಂಸ್ಥೆ ಮತ್ತು ಆಯಾ ಗ್ರಾಮಸ್ಥರ ನೆರವಿನಿಂದ ಇಂತಹ ದೇಗುಲಗಳ ಜೀರ್ಣೋದ್ಧಾರ ಮಾಡಿಸುತ್ತಾರೆ. ನಮ್ಮ ಸಂಸ್ಕೃತಿ, ಇತಿಹಾಸ ಸಾರುವ ಇಂತಹ ದೇಗುಲಗಳು, ಶಾಸನ–ಸ್ಮಾರಕಗಳಿಂದ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವ ಮೂಡುತ್ತದೆ ಎಂಬ ಅಭಿಪ್ರಾಯ ಕಲೀಮುಲ್ಲಾ ಅವರದ್ದು. ಅವರ ಪ್ರೇರಣಾದಾಯಕ ಕೆಲಸದ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.