ADVERTISEMENT

ಸೋಮವಾರ ವಿಶ್ವಾಸಮತ ನೂರಕ್ಕೆ ನೂರು ಸಾಬೀತಾಗುತ್ತೆ: ಸಿಎಂ ಯಡಿಯೂರಪ್ಪ  

ಬೂಕನಕೆರೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 8:30 IST
Last Updated 27 ಜುಲೈ 2019, 8:30 IST
   

ಮಂಡ್ಯ:ಸೋಮವಾರ ವಿಶ್ವಾಸ ಮತ ನೂರಕ್ಕೆ ನೂರು ಸಾಬೀತಾಗುತ್ತೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ತಮ್ಮ ಹುಟ್ಟೂರು ಬೂಕನಕೆರೆಗೆ ಶನಿವಾರ ಭೇಟಿ ನೀಡಿದ ವೇಳೆ ಅವರು ಮಾಧ್ಯಮದವರ ಜತೆ ಮಾತನಾಡಿದರು.

ಗವಿ ಸಿದ್ಧಲಿಂಗೇಶ್ವರನ ಸನ್ನಿದಿಯಲ್ಲಿ ದೇವರ ದರ್ಶನ ಮಾಡಿದೆ. ನಮ್ಮ ತಂದೆಯವರು ಇಲ್ಲಿಯೇ ನೆಲೆಸಿ ಪೂಜೆ ಮಾಡುತ್ತಿದ್ದರು ಎಂದು ಹೇಳಿದರು.

ADVERTISEMENT

ನಮ್ಮ ಮನೆಗೆ ಭೇಟಿ ಕೊಟ್ಟು ಮನೆಯವರನ್ನೆಲ್ಲಾ ಮಾತನಾಡಿಸಿದ್ದೇನೆ ಎಂದು ಯಡಿಯೂರಪ್ಪ ಸಂತಸಹಂಚಿಕೊಂಡರು.

ಮುಖ್ಯಮಂತ್ರಿಯಾಗ ಅಧಿಕಾರ ಸ್ವೀಕರಿಸಿದ ಬಳಿಕ ಗ್ರಾಮಕ್ಕೆ ಬಂದ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.
ಗ್ರಾಮದಲ್ಲಿ ಕಿಕ್ಕಿರಿದು ಸೇರಿದ್ದ ಜನರು ಯಡಿಯೂರಪ್ಪ ಪರ ಘೋಷಣೆ ಕೂಗಿ ಸ್ವಾಗತಿಸಿದರು.

105ಸದಸ್ಯರಿರುವ ಬಿಜೆಪಿಗೆ ಬಹುಮತ ಸಾಬೀತು ಮಾಡುವ ಸವಾಲು ಮುಂದಿದೆ.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.