ಮಂಡ್ಯ: ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಅನ್ವಯ ಮೈಷುಗರ್ ಕಾರ್ಖಾನೆಗೆ ಪೂರೈಸಿದ ಟನ್ ಕಬ್ಬಿಗೆ ₹ 2,920 ದರ ನೀಡಲಾಗುವುದು. ರಾಜ್ಯ ಸರ್ಕಾರ ಆದೇಶ ಹೊರಡಿಸಿದ ತಕ್ಷಣವೇ ಹೆಚ್ಚುವರಿ ಮೊತ್ತವನ್ನು ಪಾವತಿ ಮಾಡಲಾಗುವುದು ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಕಾರ್ಖಾನೆಯು 2023-24ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಜೂನ್ 6ರಿಂದ ಆರಂಭಿಸಿತು. ರೈತರ ಸಹಕಾರದಿಂದ ಇಲ್ಲಿಯವರೆಗಗೆ 61,942 ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ. ಕಂಪನಿಯ ಏಳಿಗೆಗೆ ಕಬ್ಬು ಬೆಳೆಯುವ ರೈತರು ಸಹಕಾರ ನೀಡಬೇಕು. ತೊಂಡೆ, ಬೇರು ಮತ್ತು ತರಗನ್ನು ಸ್ವಚ್ಚಗೊಳಿಸಿ ಪಕ್ವತೆ ಹೊಂದಿದ ಗುಣಮಟ್ಟದ ತಾಜಾ ಕಬ್ಬನ್ನು ಮಾತ್ರ ಕಾರ್ಖಾನೆಗೆ ಪೂರೈಸಬೇಕು ಎಂದು ತಿಳಿಸಿದ್ದಾರೆ.
ಕಟಾವು ಮಾಡಿದ 24 ಗಂಟೆಯೊಳಗೆ ಸರಬರಾಜು ಮಾಡಿದರೆ ಒಳ್ಳೆಯದು, ಆಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಕಂಪನಿಯ ಶ್ರೇಯೋಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.