ADVERTISEMENT

ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಮಹತ್ವ ನೀಡಿ: ಚಲುವರಾಜು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:21 IST
Last Updated 6 ನವೆಂಬರ್ 2024, 16:21 IST
ನಾಗಮಂಗಲ ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕಾಲೇಜಿಗೆ ರಕ್ತದಾನದ ಪ್ರಮಾಣ ಪತ್ರವನ್ನು ವಿವರಿಸಲಾಯಿತು.
ನಾಗಮಂಗಲ ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕಾಲೇಜಿಗೆ ರಕ್ತದಾನದ ಪ್ರಮಾಣ ಪತ್ರವನ್ನು ವಿವರಿಸಲಾಯಿತು.   

ನಾಗಮಂಗಲ: ವಿದ್ಯಾರ್ಥಿಗಳು  ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸೇವಾ ಯೋಜನೆ, ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಡಿವೈಎಸ್ಪಿ ಚಲುವರಾಜು ಹೇಳಿದರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಇಂಡಿಯನ್ ಯೂತ್ ರೆಡ್ ಕ್ರಾಸ್ ಮತ್ತು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತೆ ಮತ್ತು ಸಂಶೋಧನಾ ಕೇಂದ್ರದ ದಿಂದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ರಕ್ತದಾನ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರಷ್ಟೇ ಪರಿಪೂರ್ಣ ಪದವೀಧರರಾಗಲು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ADVERTISEMENT

  ಡಾ‌.ಸೋಮಶೇಖರ್ ಅವರು ರಕ್ತದಾನ , ಅಂಗಾಂಗ  ದಾನದ ಮೂಲಕ ವಿದ್ಯಾರ್ಥಿಗಳು ಸಮಾಜದ ಋಣ ತೀರಿಸುವ ಅವಕಾಶವಿದೆ ಎಂದರು. ರಕ್ತದಾನದ ನಿಯಮಗಳು, ಕ್ರಮಗಳನ್ನು  ವಿವರಿಸಿದರು.

  ಪ್ರಾಂಶುಪಾಲ ಎಚ್.ಎಸ್.ರವೀಂದ್ರ ಮಾತನಾಡಿ, ಮಠ ಗ್ರಾಮೀಣ ಭಾಗದ ಜನರು ಆಸ್ಪತ್ರೆಯ ಎಲ್ಲಾ ಸೌಲಭ್ಯಗಳನ್ನು  ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.103ಯೂನಿಟ್ ರಕ್ತ ಸಂಗ್ರಹವನ್ನು ಮಾಡಲಾಯಿತು. ನಂತರ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ರಕ್ತದಾನ ಪ್ರಮಾಣ ಪತ್ರ ವಿವರಿಸಲಾಯಿತು.

  ಬ್ರಹ್ಮಚಾರಿ ಸತ್ಕೀರ್ತಿನಾಥ ಜೀ, ಡಾ.ಶೋಭಿತ್ ರಂಗಪ್ಪ, ಡಾ. ಪ್ರಶಾಂತ್ ಕಾಳಪ್ಪ, ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಎಸ್.ಶಿವಕುಮಾರ್, ಎಂಜಿನಿಯರ್ ಪಾಂಡು, ಯೂತ್ ರೆಡ್ ಕ್ರಾಸ್ ಅಧಿಕಾರಿ ಆರ್.ಮೋಹನ್ ಕುಮಾರ್ , ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.