ಮಂಡ್ಯ: ನಾಗಮಂಗಲ ಗಲಭೆ ಪ್ರಕರಣದ 54 ಆರೋಪಿಗಳನ್ನು ಪೊಲೀಸರು ಗುರುವಾರ ನಾಗಮಂಗಲದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ ಅವರು ಆರೋಪಿಗಳನ್ನು ಸೆ.25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನಂತರ ಆರೋಪಿಗಳನ್ನು ಪೊಲೀಸರು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು.
ತಮ್ಮ ಮಕ್ಕಳು ಜೈಲುಪಾಲಾದ ವಿಷಯ ಕೇಳಿದ ತಾಯಿಯೊಬ್ಬರು ನಾಗಮಂಗಲ ನ್ಯಾಯಾಲಯದ ಮುಂಭಾಗ ಕುಸಿದು ಬಿದ್ದರು. ಮತ್ತೊಂದೆಡೆ ಜೈಲು ಸೇರಿದ ಯುವಕರ ಕುಟುಂಬಸ್ಥರು ರೋದಿಸಿದರು. ನ್ಯಾಯಾಲಯದ ಹೊರಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.