ಮಂಡ್ಯ: ಕೆಆರ್‌ಎಸ್ ಜಲಾಶಯದ ಸುರಕ್ಷತೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ವಿಜಯ್‌ಕುಮಾರ್ ಜಲಾಶಯ ಕುರಿತು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆಆರ್‌ಎಸ್ ಜಲಾಶಯದಲ್ಲಿ ಯಾವುದೇ ರೀತಿಯಾಗಿ ಬಿರುಕು ಕಂಡುಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗಿದೆ. ನಿಗಮದ ತಂತ್ರಜ್ಞರು ಪ್ರತಿನಿತ್ಯ ಜಲಾಶಯದ ಸುರಕ್ಷತೆ ಪರಿಶೀಲನೆ ನಡೆಸುತ್ತಾರೆ. ಜಲಾಶಯ ಭದ್ರವಾಗಿದ್ದು ಸಾರ್ವಜನಿರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.
‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ವೇಳೆ ಸಂಸದೆ ಸುಮಲತಾ ಅವರಿಗೂ ಇದೇ ಮಾಹಿತಿ ನೀಡಲಾಗಿದೆ. ಬಿರುಕು ಬಿಟ್ಟಿದೆ ಎಂಬುದು ಕೇವಲ ಊಹಾಪೋಹ’ ಎಂದರು.
‘ಜಲಾಶಯದಲ್ಲಿ ಕ್ರಸ್ಟ್ ಗೇಟ್ ಬದಲಾವಣೆ ಕಾಮಗಾರಿ ನಡೆಯುತ್ತಿದೆ. ಬದಲಿ ಗೇಟ್ ಅಳವಡಿಸುವಾಗ ಕಲ್ಲುಗಳನ್ನು ಹೊರಗೆ ತೆರೆಯಲಾಗಿದೆ. ಕೆಲ ಕಿಡಿಗೇಡಿಗಳು ಅದರ ವಿಡಿಯೊ ತೆಗೆದು ಜಲಾಶಯವೇ ಬಿರುಕುಬಿಟ್ಟಿದೆ ಎಂಬ ಸುಳ್ಳು ಸುದ್ದಿ ಹರಡಿಸಿದ್ದಾರೆ. ಇದನ್ನು ಯಾರೂ ನಂಬಬಾರದು’ ಎಂದು ಹೇಳಿದರು.
ಇವನ್ನೂ ಓದಿ
*ಕೆಆರ್ಎಸ್ಗೆ ಸುಮಲತಾನ್ನ ಅಡ್ಡಡ್ಡ ಮಲಗಿಸಿ: ಎಚ್ಡಿಕೆ ಹೇಳಿಕೆಗೆ ಸಂಸದೆ ಆಕ್ರೋಶ
*ಮಹಿಳೆಯರ ಬಗ್ಗೆ ಎಚ್ಡಿಕೆ ಗೌರವಯುತವಾಗಿ ಮಾತನಾಡಲಿ: ಕೃಷಿ ಸಚಿವ
*ಮೈಷುಗರ್ ಕಾರ್ಖಾನೆ ಖಾಸಗಿಗೆ ವಹಿಸದಂತೆ ಎಚ್.ಡಿ. ಕುಮಾರಸ್ವಾಮಿ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.