ADVERTISEMENT

‘ದಸರಾದಲ್ಲಿ ಕವಿಗಳು, ಕಲಾವಿದರಿಗೆ ಗೌರವವಿಲ್ಲ’

ಜಾನಪದ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಿ.ಪಿ. ಸ್ವಾಮಿ ಬೇಸರಡಿ.ಪಿ. ಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 14:15 IST
Last Updated 5 ಅಕ್ಟೋಬರ್ 2024, 14:15 IST
ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವದ ನಿಮಿತ್ತ ಶ್ರೀರಂಗ ವೇದಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸ್ವಾಮಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವದ ನಿಮಿತ್ತ ಶ್ರೀರಂಗ ವೇದಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸ್ವಾಮಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಇದ್ದಾರೆ   

ಶ್ರೀರಂಗಪಟ್ಟಣ: ದಸರಾ ಉತ್ಸವದಲ್ಲಿ ಕವಿಗಳು ಮತ್ತು ಸ್ಥಳಿಯ ಕಲಾವಿದರಿಗೆ ಗೌರವ ನೀಡದೇ ಇರುವುದು ವ್ಯವಸ್ಥೆಯ ವೈಫಲ್ಯ ಎಂದು ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ, ದಸರಾ ಉತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಕವಿಗಳು ಮತ್ತು ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಾಡಹಬ್ಬದಂತಹ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡುವ ಕವಿ, ಕಲಾವಿದರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಮುಂದಿನ ಬಾರಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.‌

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಇದೇ ವೇದಿಕೆಯಲ್ಲಿ ಆರ್ಕೇಸ್ಟ್ರಾ ನಡೆಸುವವರಿಗೆ ಕೈತುಂಬಾ ಹಣ ಕೊಡುತ್ತಾರೆ. ಕವಿಗೋಷ್ಠಿಗಳಿಗೆ ಅಗತ್ಯ ಅನುದಾನ ನೀಡದೇ ಇದ್ದರೆ ಕಾರ್ಯಕ್ರಮ ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರು. ಕವಿ ದೊ.ಚಿ. ಗೌಡ ಕವಿಗೋಷ್ಠಿ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕವಿಗಳಾದ ಸಾವೆರ ಸ್ವಾಮಿ ‘ನಾಟಕ ಕರ್ನಾಟಕ’, ಮಂಜುಳಾ ರಮೇಶ್‌ ‘ತಬ್ಬಲಿ ಬಾಲಕ’, ಕಾಳೇನಹಳ್ಳಿ ಪುಟ್ಟೇಗೌಡ ‘ಸನ್ನೆಗಾರ’, ದರಸಗುಪ್ಪೆ ನೇತ್ರ ‘ಹೊತ್ತು ಹೆತ್ತವಳು’, ಕೆ.ಎನ್‌. ಪುರುಷೋತ್ತಮ ಅವರ ‘ಬದುಕು’ ಕವನಗಳು ಗಮನ ಸೆಳೆದವು. ಕಾಡು ಬೋರಣ್ಣ, ಸಿ.ಬಿ. ಉಮಾಶಂಕರ್‌, ಅಭಿನಂದನ್‌, ನಾ.ರೈತ, ಎಚ್‌.ಆರ್‌, ತ್ರಿವೇಣಿ, ಕ್ಯಾತನಹಳ್ಳಿ ರಂಗನಾಥ್‌, ಶ್ವೇತಾ, ಕೆ.ಬಿ. ಜಯರಾಂ, ಎಚ್‌.ಎಸ್‌. ಭರತ್‌ಕುಮಾರ್‌ ಕವಿತೆ ವಾಚಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ, ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿಗಳಾದ ಹುಸ್ಕೂರು ಕೃಷ್ಣೇಗೌಡ, ಪಣ್ಣೆದೊಡ್ಡಿ ಹರ್ಷ, ಮಾಜಿ ಅಧ್ಯಕ್ಷರಾದ ಎಂ.ಬಿ. ಕುಮಾರ್‌, ಪಾಲಹಳ್ಳಿ ಸುರೇಂದ್ರ, ಚಿಕ್ಕಪಾಳ್ಯ ಪುರುಷೋತ್ತಮ, ಕಾರ್ಯದರ್ಶಿ ಸಿ. ಸ್ವಾಮಿಗೌಡ, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್‌, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್‌, ಡಿ.ಎಂ. ರವಿ ಭಾಗವಹಿಸಿದ್ದರು.

ಯುವ ಕವಿಗೋಷ್ಠಿಯಲ್ಲೂ ಬೇಸರ: ಪಟ್ಟಣದ ಪರಿವರ್ತನಾ ಕಾಲೇಜಿನಲ್ಲಿ ನಡೆದ ದಸರಾ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಾ.ವೆ.ರ ಸ್ವಾಮಿ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಕೊಠಡಿಯಲ್ಲಿ ದಸರಾ ಕವಿಗೋಷ್ಠಿ ನಡೆಯುತ್ತಿರುವುದು ಸರಿಯಲ್ಲ. ಯಾವುದೇ ಸಂಭ್ರಮ ಇಲ್ಲದ ಕವಿಗೋಷ್ಠಿ ನಿರರ್ಥಕ ಎಂದು ಬೇಸರದಿಂದ ಹೇಳಿದರು.

ಸಾಹಿತಿ ಸತೀಶ್‌ ಟಿ. ಜವರೇಗೌಡ ಕವಿಗೋಷ್ಠಿ ಉದ್ಘಾಟಿಸಿದರು. ಕಾವ್ಯ ಸಮಾಜದ ವಿಕಾಸ ಮತ್ತು ಸಂತಸಕ್ಕೆ ಕಾರಣ ಆಗಬೇಕು. ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಕವಿಗಳು ಕೋಮುವಾದ, ಭ್ರಷ್ಟಾಚಾರ, ಮಹಿಳೆಯರ ಶೋಷಣೆಯನ್ನು ಖಂಡಿಸಬೇಕು ಎಂದರು.

ಮೀರಾ ಶಿವಲಿಂಗಯ್ಯ, ಹುಸ್ಕೂರು ಕೃಷ್ಣೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು, ಸಿ. ಸ್ವಾಮಿಗೌಡ, ಕೂಡಲಕುಪ್ಪೆ ಸೋಮಶೇಖರ್‌, ರವಿಕುಮಾರ್‌, ಕೊತ್ತತ್ತಿ ಮಹದೇವು ಇದ್ದರು.

ಕವಿಗಳಾದ ಮಹದೇವಸ್ವಾಮಿ, ಬಿ.ಟಿ. ದಾಸಪ್ರಕಾಶ್‌, ಅನನ್ಯ, ಪೂಜಾ, ಅಲ್ಲಾಪಟ್ಟಣ ಸತೀಶ್‌, ಕಟ್ಟೆ ಕೃಷ್ಣಸ್ವಾಮಿ, ಆರ್‌.ಕೆ. ನಾಗರಾಜು, ಆದಿತ್ಯ ಭಾರದ್ವಾಜ್‌, ನಾಗರಾಜು, ‘ಪರಿಸರ’ ರಮೇಶ್‌, ಕೆ.ಶೆಟ್ಟಹಳ್ಳಿ ರಾಜಶೇಖರ್‌, ಲೋಕೇಶ್‌, ಅರುಣಕುಮಾರ್‌, ಹರೀಶ್‌ ಬೆಳವಾಡಿ, ಜಯಲಕ್ಷ್ಮಿ ಕೆ.ಆರ್‌. ಪೇಟೆ, ಮೋಹನಕುಮಾರ್‌, ಚಂದ್ರಶೇಖರ್‌ ಕವಿತೆ ವಾಚಿಸಿದರು.

ಶ್ರೀರಂಗಪಟ್ಟಣದ ಪರಿವರ್ತನಾ ಕಾಲೇಜಿನಲ್ಲಿ ದಸರಾ ಉತ್ಸವದ ನಿಮಿತ್ತ ಶನಿವಾರ ನಡೆದ ಯುವ ಕವಿಗೋಷ್ಠಿಯನ್ನು ಯುವ ಬರಹಗಾರರ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ ಉದ್ಘಾಟಿಸಿದರು. ಮೀರಾ ಶಿವಲಿಂಗಯ್ಯ ಸಿದ್ದಲಿಂಗು ಸಾ.ವೆ.ರ ಸ್ವಾಮಿ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.