ಕೆ.ಆರ್.ಪೇಟೆ: ‘ನರೇಗಾದಡಿ ತಾಲ್ಲೂಕಿನಲ್ಲಿ ರೈತರಿಗೆ ಬರಬೇಕಾದ ಬಾಕಿ ಮೊತ್ತ ₹60 ಕೋಟಿ ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಅವರು, ‘2021 ರಿಂದ ತೋಟಗಾರಿಕೆ, ತಾಲೂಕು ಪಂಚಾಯಿತಿ, ಅರಣ್ಯ, ರೇಷ್ಮೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ರೈತರು ₹60 ಕೋಟಿ ಸಪ್ಲೈಬಿಲ್ ಇದುವರೆಗೂ ರೈತರಿಗೆ ತಲುಪಿಲ್ಲ. ಮುಗಿದಿರುವ ಕಾಮಗಾರಿಗಳ ಹಣವನ್ನು ಪಡೆಯಲು ರೈತರುಗಳು ಅನುಭವಿಸುತ್ತಿರುವ ಕಷ್ಟಹೇಳತೀರದಾಗಿದೆ’ ಎಂದು ತಿಳಿಸಿದರು.
‘ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಫಲಾನುಭವಿಗಳಿಗೆ ಹಣ ನೀಡದೆ ಸಾಲಗಾರರನ್ನಾಗಿ ಮಾಡಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನಾ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.