ಸಂತೇಬಾಚಹಳ್ಳಿ: ‘ಆತ್ಮ ಹಾಗೂ ಪರಮಾತ್ಮನ ನಡುವಿನ ಸಂಬಂಧ ಉತ್ತಮವಾಗಿದ್ದರೆ ಜೀವನದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಶ್ರೀ ಅರೇಶಂಕರ ಮಠದ ಪೀಠಾಧಿಪತಿ ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದರು.
ಸಂತೇಬಾಚಹಳ್ಳಿ ಹೋಬಳಿಯ ಹರುಪನಹಳ್ಳಿಯಲ್ಲಿ ಪಟ್ಟಲದಮ್ಮ ದೇವಿ ಹಾಗೂ ಚಿಕ್ಕಮ್ಮ ದೇವಿಯ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸ ಸ್ಥಾಪನೆ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಪ್ರತಿ ಗ್ರಾಮದಲ್ಲಿಯೂ ಕೂಡ ದೇವಾಲಯಗಳ ನಿರ್ಮಾಣ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಭಕ್ತರು ತಮಗೆ ಕಷ್ಟ ಬಂದಾಗ ಮಾತ್ರ ಭಕ್ತರು ದೇವರನ್ನು ನೆನೆಯುತ್ತಾರೆ. ದೇವರನ್ನು ಪ್ರತಿನಿತ್ಯ ನೆನೆದು ಪ್ರಾರ್ಥನೆ ಮಾಡಿದರೆ ಕಷ್ಟಗಳಿಂದ ಪಾರಾಗಬಹುದು. ಮಾನವರು ಹೆಚ್ಚು ಧರ್ಮದ ಕೆಲಸವನ್ನು ಮಾಡಬೇಕು. ಆತ್ಮ ಹಾಗೂ ದೇಹಗಳ ಸಮ್ಮಿಲನವೇ ಮನುಷ್ಯ’ ಎಂದು ಹೇಳಿದರು.
‘ದೇಹಕ್ಕೆ ಆತ್ಮ ಮುಖ್ಯ ಹಾಗೂ ಮನುಷ್ಯನಿಗೆ ಪ್ರತಿಯೊಂದು ಮುಖ್ಯವಾಗಿದೆ. ಎಲ್ಲರೂ ಯಾರಿಗೂ ನೋವು ಹಾಗೂ ಕೆಡಕು ಬಯಸದೆ ಮುನ್ನಡೆದರೆ ಅದು ಸಾಧನೆ ಮಾಡಿದಂತೆ’ ಎಂದು ಹೇಳಿದರು.
‘ಗ್ರಾಮಗಳಲ್ಲಿ ಗ್ರಾಮದೇವತೆಗಳನ್ನು ಪೂಜೆ ಮಾಡುವುದರಿಂದ ಗ್ರಾಮದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಪೋಷಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕೃತಿ ಕಲಿಸಬೇಕು’ ಎಂದರು.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಬಿ. ಪ್ರಕಾಶ್, ಅರವಿಂದ್, ಮನ್‌ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ. ಹರೀಶ್, ಮುಖಂಡರಾದ ಪಚ್ಚಿಗೌಡ, ನಿಲೇಶ್, ಧನಂಜಯ, ಕುಮಾರ್, ಆಟೊಕುಮಾರ್, ಎಚ್.ಎಂ.ರವಿ, ಪ.ನಾಗರಾಜು, ಈರೇಗೌಡ, ಉಮೇಶ್, ನವೀನ್, ಶ್ರೀಕರ, ಮಹಾದೇವ, ಅಶೋಕ್, ಅರವಿಂದ್, ಅರುಣ್ ಕುಮಾರ್, ರಾಜು, ರುದ್ರೇಶ್, ಸ್ವಾಮಿ, ಮನೋಜ್, ಪುಟ್ಟರಾಜೇಗೌಡ, ಮಂಜು, ರಾಜೇಗೌಡ, ಗೌಡಗೌಡ, ಶಂಭುಗೌಡ, ಉದಯ್, ದರ್ಶನ್, ನಂಜಪ್ಪ, ಜಗದೀಶ್, ರಾಮೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.