ADVERTISEMENT

‘ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 14:14 IST
Last Updated 5 ಅಕ್ಟೋಬರ್ 2024, 14:14 IST
ಮೇಲುಕೋಟೆಗೆ ಆಗಮಿಸಿದ ಕಿತ್ತೂರು ವಿಜಯೋತ್ಸವ ರಥಕ್ಕೆ ಸ್ವಾಗತ ನೀಡಿದ ಅಧಿಕಾರಿಗಳು. 
ಮೇಲುಕೋಟೆಗೆ ಆಗಮಿಸಿದ ಕಿತ್ತೂರು ವಿಜಯೋತ್ಸವ ರಥಕ್ಕೆ ಸ್ವಾಗತ ನೀಡಿದ ಅಧಿಕಾರಿಗಳು.    

ಮೇಲುಕೋಟೆ: ‘ಸ್ವಾಭಿಮಾನಕ್ಕೆ ತ್ಯಾಗಬಲಿದಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ ದಾರಿ ಯುವ ಪೀಳಿಗೆಗಳಿಗೆ ಮಾರ್ಗದರ್ಶನವಾಗಿದೆ’ ಎಂದು ಉಪತಹಶೀಲ್ದಾರ ರಾಜೇಶ್ ಹೇಳಿದರು.

ಮಂಡ್ಯ ಮೂಲಕ ಮೇಲುಕೋಟೆಗೆ ಆಗಮಿಸಿದ ‘ಕಿತ್ತೂರು ವಿಜಯೋತ್ಸವದ ಜ್ಯೋತಿ’ ರಥಕ್ಕೆ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಸಿರು ಬಾವುಟ ಪ್ರದರ್ಶಿಸಿ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,‘ಕಿತ್ತೂರು ವಿಜಯವಾಗಿ 200 ವರ್ಷಗಳಾಗುತ್ತವೆ. ಇದರ ಅಂಗವಾಗಿ ವಿಜಯೋತ್ಸವ ಆಚರಿಸಲಾಗುತ್ತಿದೆ ಈ ಹಿನ್ನಲೆ ಎಲ್ಲಾ ಜಿಲ್ಲೆಗಳ ಮೂಲಕ ರಥವೂ ಹಾದು ಕಿತ್ತೂರನ್ನು ತಲುಪಲಿದೆ’ ಎಂದರು.

ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆಂದರೆ ಅದು ಕಿತ್ತೂರು ರಾಣಿ ಚನ್ನಮ್ಮ. ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಬ್ರಿಟಿಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದರು ಎಂದರು.

ADVERTISEMENT

ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಗೆ ಆಗಮಿಸಿದ ವಿಜಯೋತ್ಸವ ರಥಕ್ಕೆ ಯಗ್ಗಡಹಳ್ಳಿ ಕೃಷ್ಣೇಗೌಡರ ತಂಡದ ಗಾರುಡಿಗೊಂಬೆ, ಕೊಂಬುಕಹಳೆ, ಪೂಜಾ ಕುಣಿತ, ಡೋಲುಕುಣಿತ ದೊಂದಿಗೆ ಇಲ್ಲಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ದೇಗುಲ ಬಳಿಗೆ ಆಗಮಿಸಿದ ರಥಕ್ಕೆ ದೇವಾಲಯದ ಪಾರುಪತ್ತೇಗಾರ್ ಎಂ. ಎನ್. ಪಾರ್ಥಸಾರಥಿ ಜ್ಯೋತಿ ದೇಗುಲದ ಪರವಾಗಿ ಪೂಜೆ ಸಲ್ಲಿಸಿದರು. ಕಂದಾಯ ಇಲಾಖೆಯ ಹಾಗೂ ಗ್ರಾಮದ ಅನೇಕ ಮುಖಂಡರು ರಥಕ್ಕೆ ಸ್ವಾಗತ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.