ಮಂಡ್ಯ: ‘ಸರ್ಕಾರ ಒಂದು ಸೂಕ್ತ ನಿವೇಶನ ಕಲ್ಪಿಸಿ ನೆರವು ನೀಡಿದರೆ ನಮ್ಮ ಮಹದೇಶ್ವರ ಸಾಂಸ್ಕೃತಿಕ ಟ್ರಸ್ಟ್‌ನಿಂದ ಶಾಲೆ ತೆರೆದು ನೀಲಗಾರ ಪರಂಪರೆಯ ಕಥಾನಕ, ಜಾನಪದ ಹಾಡುಗಾರಿಕೆ ತರಬೇತಿ ನೀಡಲು ಸಿದ್ಧ’ ಎಂದು ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುದ್ಧ ಭಾರತ ಫೌಂಡೇಷನ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಜನಪದ ಕಲೆ ಉಳಿಯಬೇಕು. ಅದರ ಕಥಾನಕಗಳು ಅಳಿಯ ಬಾರದು. ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಲಿಂಗಯ್ಯ, ಮಹದೇಶ್ವರ, ಚುಂಚನಗಿರಿಭೈರವ, ಬಿಳಿಗಿರಿ ರಂಗ ನಾಥನ ಕಥಾನಕ ಗಳನ್ನುಹಗಲು ರಾತ್ರಿ ನಿರಂತರವಾಗಿ ಪ್ರಸ್ತುತಪಡಿಸುವಷ್ಟು ವಿದ್ಯೆ ಕಲಿತೆ. ಆದರೆ, ಇದುನನ್ನ ತಲೆಗೇ ಅಂತ್ಯವಾಗಬಾರದು. ಈ ನೀಲಗಾರ ಪರಂಪರೆ ಮುಂದಿನತಲೆಮಾರಿಗೂ ಉಳಿದು ಬೆಳೆಯಬೇಕೆಂಬುದು ನನ್ನ ಕಾಳಜಿ’ ಎಂದರು.
‘ಆಸಕ್ತ ಶಿಷ್ಯರಿಗೆ ನನ್ನ ವಿದ್ಯೆ ಧಾರೆಯೆ ರೆಯುತ್ತಿದ್ದೇನೆ. ಆದರೆ, ಇವತ್ತಿನ ಆಧುನಿಕ ಜೀವನ ಶೈಲಿಗೆಒಗ್ಗಿಕೊಂಡ ಅದರಲ್ಲೂ ಗ್ರಾಮೀಣರಲ್ಲಿ ಮೊಬೈಲ್, ಟ್ಯಾಬ್ ಸಂಸ್ಕೃತಿಗೆ ಒಳಗಾದವರು ನಮ್ಮ ಸಂಸ್ಕೃತಿ, ಪರಂಪರೆ ನಿರ್ಲಕ್ಷಿಸು ತ್ತಿರುವುದು ಬೇಸರ ತರಿಸಿದೆ’ ಎಂದರು.
‘ನಾನು ಜನಪದ ಕಲಾವಿದನಾಗಿ ಒಂದು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪುರಸ್ಕೃತನಾಗುವವರೆಗೆ ಡಾ.ರಾಜ್ ಅವರ ಪ್ರೇರಣೆಯ ನೆರಳಿದೆ. ಡಾ.ರಾಜ್ ಅಭಿನಯದ ಹಲವು ಸಿನಿಮಾಗಳನ್ನು 10 ರಿಂದ 15 ಬಾರಿ ನೋಡಿದ್ದೇನೆ. ಬಂಗಾರದ ಮನುಷ್ಯ ಚಿತ್ರವನ್ನು 90ಕ್ಕೂ ಹೆಚ್ಚು ಸಲ ನೋಡಿದ್ದೇನೆ’ ಎಂದರು.
ಜೆ.ರಾಮಯ್ಯ, ಲಿಂಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.