ADVERTISEMENT

2023ಕ್ಕೆ ಜೆಡಿಎಸ್‌ ನೇತೃತ್ವದ ಪ್ರಾದೇಶಿಕ ಸರ್ಕಾರ: ಶಾಸಕ ಅನ್ನದಾನಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 2:01 IST
Last Updated 25 ಜೂನ್ 2021, 2:01 IST
ಶಾಸಕ ಡಾ.ಕೆ.ಅನ್ನದಾನಿ
ಶಾಸಕ ಡಾ.ಕೆ.ಅನ್ನದಾನಿ   

ಮದ್ದೂರು : ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರ ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್ ಅಧಿಕಾರಕ್ಕೆ ಬರಲಿದೆ ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ. ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನೆರೆಯ ರಾಜ್ಯಗಳಾದ ತಮಿಳುನಾಡು,ಕೇರಳ ಹಾಗೂ ಪಶ್ಚಿಮಮ ಬಂಗಾಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿ ರುವುದರಿಂದ ಅವುಗಳಲ್ಲಿ ಜನ ಪರವಾದ ಕೆಲಸಗಳು ನಡೆಯುತ್ತಿವೆ ಹಾಗೂ ಅಂತಹ ರಾಜ್ಯಗಳು ಅಭಿವೃದ್ದಿ ಹೊಂದುತ್ತವೆ ಮತ್ತು ಕೆಲವು ನಿರ್ಣಯಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ವರಿಷ್ಠರ ಹಸ್ತಕ್ಷೇಪ ಇರುವುದಿಲ್ಲ ಆದ್ದರಿಂದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ನತೃತ್ವದಲ್ಲಿ ಕನ್ನಡಿಗರ ಪಕ್ಷ ಅಧಿಕಾರಕ್ಕೆ ಬಂದು ಉತ್ತಮ ಆಡಳಿತವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ 25 ಮಂದಿ ಸಂಸದರು ಗೆದ್ದಿದ್ದಾರೆ. ಅದರಿಂದ ರಾಜ್ಯಕ್ಕೆ ಏನು ಉಪಯೋಗವಾಗಿದೆ. ಕರೋನಾ 1 ನೇ ಮತ್ತು 2ನೇ ಅಲೆಯ ನಿಯಂತ್ರಣಕ್ಕೆ ಸಂಸದರ ಕೊಡುಗೆ ಏನು, ಮೇಕೆ ದಾಟು ಬಳಿ ಅಣೆ ಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರು ಏನು ಕ್ರಮಕೈಗೊಂಡಿದ್ದಾರೆ, ಕೊರೋನ ಸಂದರ್ಭದಲ್ಲಿಯೂ ಅಧಿಕಾರಕ್ಕೋಸ್ಕರ ರಾಜ್ಯ ಸಂಪುಟದ ಮಂತ್ರಿಗಳು ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರೆ ಎಂದು ಸಂಸದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದಕ್ಷಿಣ ಭಾರತದಲ್ಲಿ ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಅಭಿವೃದ್ದಿ ದೃಷ್ಠಿಯಿಂದ ಅಲ್ಲಿನ ಜನತೆ ಪ್ರಾದೇಶಿಕ ಪಕ್ಷವನ್ನ ಬೆಂಬಲಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬಂದರೆ ಕನ್ನಡಿಗರ ನಾಡು-ನುಡಿ, ಜಲ, ಭಾಷೆ ಉಳಿಸುವುದಕ್ಕೋಸ್ಕರ ಕನ್ನಡಿಗರ ಪಕ್ಷವನ್ನಾಗಿ ಮಾಡಲು ಕುಮಾರಸ್ವಾಮಿ ಎಚ್ಚರಿಸಿದ್ದಾರೆ ಎಂದರು.

ಮುಂದಿನ ಮಂಗಳವಾರ ಮಳವಳ್ಳಿ ಕ್ಷೇತ್ರದಲ್ಲಿನ ಕೊರೋನ ವಾರಿಯರ್ಸ್ ಗೆ ಫುಡ್ ಕಿಟ್ ವಿತರಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಆಗಮಿಸಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.