ADVERTISEMENT

ಯೋಗ ಕೇಂದ್ರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:24 IST
Last Updated 7 ಜುಲೈ 2024, 14:24 IST
ಕೆ.ಆರ್. ಪೇಟೆಯ ಯೋಗ ಕೇಂದ್ರದಲ್ಲಿ ನಿವೃತ್ತಿಯಾಗಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕೆ.ಆರ್. ಪೇಟೆಯ ಯೋಗ ಕೇಂದ್ರದಲ್ಲಿ ನಿವೃತ್ತಿಯಾಗಿರುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.   

ಕೆ.ಆರ್. ಪೇಟೆ: ಪಟ್ಟಣದ ಹೊರವಲಯದಲ್ಲಿ ಇರುವ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ, ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಯೋಗ ಪಟು ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಬೋರಲಿಂಗನಾಯಕ್, ಶಿವಲಿಂಗಪ್ಪ, ದೊಡ್ಡೇಗೌಡ, ಜಗದೀಶ್, ಮಂಜೇಗೌಡ, ಗೋಪಾಲ, ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು.

ಶಿಕ್ಷಕ ಹಳಿಯೂರು ಯೋಗೇಶ್ ಮಾತನಾಡಿ, ‘ಜೂನ್ ತಿಂಗಳಲ್ಲಿ ನಿವೃತ್ತಿಯಾದ ಏಳು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ. ಎಲೆಮರೆ ಕಾಯಿಯಂತೆ ಬದುಕಿ ಬಾಳಿದ ಈ ಶಿಕ್ಷಕರು ಆದರ್ಶವಾಗಿ ಬದುಕು ನಡೆಸಿದರು ಎಂದರು.

ADVERTISEMENT

ಯೋಗ ಪಟು ಅಲ್ಲಮಪ್ರಭು ಮಾತನಾಡಿದರು. ಶಿಕ್ಷಣ ಇಲಾಖೆಯ ಜಿ.ಎಸ್. ಮಂಜು ಜ್ಞಾನೇಶ್, ಎಸ್.ರಂಗಸ್ವಾಮಿ, ಕೃಷ್ಣ ನಾಯಕ್, ವೀರಭದ್ರಯ್ಯ, ರಾಮಚಂದ್ರ, ಶ್ರೀಧರ್ ಮಹೇಶ್, ತಿಲಕ್ ರಾಮ್ , ಪ್ರಕಾಶ್, ಇಂದ್ರಕುಮಾರ್, ಟೈಲರ್ ವಾಸು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.