ಸಂತೇಬಾಚಹಳ್ಳಿ: ಭಾರತೀಪುರ ಗ್ರಾಮದ 3 ಎಕರೆ ಹೊಲದಲ್ಲಿ ಬೆಳೆದಿದ್ದ ರಾಗಿ ಬೆಳೆ ಜಲಾವೃತವಾಗಿ, ಮೊಳಕೆ ಬಂದಿದ್ದು ರೈತ ಈರೇಗೌಡ ಕಂಗಾಲಾಗಿದ್ದಾರೆ.
ಈರೇಗೌಡ ಮಾತನಾಡಿ, 94 ನೇ ಸರ್ವೇ ನಂಬರ್‌ನ ಹೊಲದಲ್ಲಿ ಬೆಳೆ ಮಾಡಿದ್ದೆವು. ಎಡೆಬಿಡದೆ ಸುರಿದ ಭಾರಿ ಮಳೆಗೆ ರಾಗಿ ಸಂಪೂರ್ಣವಾಗಿ ಮೊಳಕೆ ಬಂದಿದೆ. ಸಾಲ ಮಾಡಿ ರಾಗಿ ಬೆಳೆಗೆ ₹60 ಸಾವಿರ ಖರ್ಚು ಮಾಡಿ ಕಂಗಾಲಾಗಿದ್ದೇವೆ. ಜಿಲ್ಲಾಡಳಿತ, ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕೃತಿ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.