ADVERTISEMENT

ಶೈಲೇಂದ್ರರಿಗೆ ಎಂ.ಎಚ್. ಮರೀಗೌಡ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:31 IST
Last Updated 18 ಅಕ್ಟೋಬರ್ 2024, 14:31 IST
ಮದ್ದೂರು ತಾಲ್ಲೂಕಿನ ದೇಶಹಳ್ಳಿಯ ಪ್ರಗತಿಪರ ಕೃಷಿಕ ಶೈಲೇಂದ್ರ ಅವರಿಗೆ ಗುರುವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮದ್ದೂರು ತಾಲ್ಲೂಕಿನ ದೇಶಹಳ್ಳಿಯ ಪ್ರಗತಿಪರ ಕೃಷಿಕ ಶೈಲೇಂದ್ರ ಅವರಿಗೆ ಗುರುವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಮದ್ದೂರು: ತಾಲ್ಲೂಕಿನ ದೇಶಹಳ್ಳಿಯ ಪ್ರಗತಿಪರ ಕೃಷಿಕ ಶೈಲೇಂದ್ರ ಅವರಿಗೆ ಗುರುವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್, ಸಂಸ್ಕೃತಿ ಅಲಯನ್ಸ್ ಸಂಸ್ಥೆ ಹಾಗೂ ಮದ್ದೂರು ಅಡ್ವೋಕೇಟ್ಸ್ ಅಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಶೈಲೇಂದ್ರ ಅವರ ತೋಟದಲ್ಲಿ ನಡೆದ ಕಾರ್ಯಕ್ರಮ ನಡೆಯಿತು.

ಅಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಕೆ.ಟಿ. ಹನುಮಂತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಎಂ.ಎಚ್. ಮರೀಗೌಡ ಅವರ ಸೇವೆ ಅಪಾರವಾಗಿದ್ದು, ಅವರು ತೋಟಗಾರಿಕಾ ಕ್ಷೇತ್ರಕ್ಕೆ ನೀಡಿರುವ ಸೇವೆ ಸ್ಮರಣೀಯ. ಅಷ್ಟೇ ಅಲ್ಲದೇ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದ ವೇಳೆ ಸಂಘವು ಅತ್ಯಂತ ಪ್ರವರ್ಧಮಾನಕ್ಕೆ ಬಂದಿತ್ತು’ ಎಂದರು.

ADVERTISEMENT

‘ದೇಶಹಳ್ಳಿಯ ಶೈಲೇಂದ್ರ ಅವರು ತಮ್ಮ ಗ್ರಾಮದ ತೋಟದಲ್ಲಿ ಅತ್ಯಂತ ಯಶಸ್ವಿಯಾಗಿ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ಅವರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ವಹಿಸಿ ಮಾತನಾಡಿ, ‘ಶೈಲೇಂದ್ರ ಅವರು ತಮ್ಮ 8 ಎಕರೆ ತೋಟದಲ್ಲಿ ತೆಂಗು, ಅಡಿಕೆ, ಏಲಕ್ಕಿ, ಕಾಫಿ, ರಕ್ತ ಚಂದನ, ಜಾಯ್ಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ತೋಟದ ಪಕ್ಕದ ಅವರ ಜಮೀನಿನಲ್ಲಿ ರಾಜಮುಡಿ ಭತ್ತವನ್ನು ಬೆಳೆದಿದ್ದಾರೆ’ ಎಂದರು.

ಮದ್ದೂರು ಅಡ್ವೋಕೇಟ್ಸ್ ಅಲಯನ್ಸ್ ಅಧ್ಯಕ್ಷ ನಾಗರಾಜು, ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಮಾಜಿ ಅಧ್ಯಕ್ಷ ಡಿ.ಪಿ. ಸ್ವಾಮಿ, ಅಲಯನ್ಸ್ ಸಂಸ್ಥೆಯ 1ನೇ ಉಪ ಗವರ್ನರ್ ಮಾದೇಗೌಡ, ಖಜಾಂಚಿ ರಕ್ಷಿತ್ ರಾಜ್, ಪ್ರಾಂತೀಯ ಅಧ್ಯಕ್ಷೆ ವಸಂತಮ್ಮ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗವಾಸ್ಕರ್, ದೀಪಾಂಜಲಿ ಡೇವಿಡ್, ಶಿವಪ್ಪ, ವಕೀಲ ಪ್ರಶಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.