ಶ್ರೀರಂಗಪಟ್ಟಣ: ದಸರಾ ಉತ್ಸವದ ನಿಮಿತ್ತ ತಾಲ್ಲೂಕಿನ ವಿಶ್ವಪ್ರಸಿದ್ಧ ಕೆಆರ್‌ಎಸ್ ಬೃಂದಾವನದಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಉದ್ಯಾನವನದ ತುಂಬೆಲ್ಲಾ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಣ್ಣು ಕೋರೈಸುತ್ತಿವೆ. ವಿದ್ಯುತ್ ದೀಪಾಲಂಕಾರ ಗುರುವಾರ ಸಂಜೆಯಿಂದ ಆರಂಭವಾಗಿದ್ದು, ಅ.12ರವರೆಗೂ ಇರುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೃಂದಾವನ ಮಾತ್ರವಲ್ಲದೆ ಅಣೆಕಟ್ಟೆ ಕೂಡ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಚಾರ್ಪೀಸ್ ಲೇಸರ್ ಮತ್ತು ಆರ್‌ಜಿಬಿ ಮಾದರಿಯ ಲೈಟ್‌ಗಳನ್ನು ಹಾಕಿದ್ದು ಕ್ಷಣ ಕ್ಷಣಕ್ಕೂ ವಿಶೇಷ ಮೆರುಗು ನೀಡುತ್ತಿದೆ. ಅಣೆಕಟ್ಟೆಯ ದಕ್ಷಿಣ ದ್ವಾರ, ಉತ್ತರ ದ್ವಾರ ಮತ್ತು ಉದ್ಯಾನದ ಪ್ರವೇಶದ್ವಾರ ಕೂಡ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ.
ಬೃಂದಾವನದಲ್ಲಿ ಅ.8ರಿಂದ 12ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 7ರಿಂದ 9.30ರವರೆಗೆ ಸಂಗೀತ, ನತ್ಯ ಇತರ ಕಾರ್ಯಗಳು ನಡೆಯಲಿವೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.