ADVERTISEMENT

ಅಪಾಯಕಾರಿ ಪಟಾಕಿಯಿಂದ ದೂರವಿರಲು ಸಲಹೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:53 IST
Last Updated 30 ಅಕ್ಟೋಬರ್ 2024, 15:53 IST
ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಡಿಜಿ ವಿಕಸನ ಮತ್ತು ಬಲ್ಲೇನಹಳ್ಳಿ ಗ್ರಾ.ಪಂ. ಡಿಜಿಟಲ್‌ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಬುಧವಾರ ಏರ್ಪಡಿಸಿದ್ದ ದೀಪಾವಳಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಹಣತೆಗಳನ್ನು ವಿತರಿಸಲಾಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಡಿಜಿ ವಿಕಸನ ಮತ್ತು ಬಲ್ಲೇನಹಳ್ಳಿ ಗ್ರಾ.ಪಂ. ಡಿಜಿಟಲ್‌ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಬುಧವಾರ ಏರ್ಪಡಿಸಿದ್ದ ದೀಪಾವಳಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಹಣತೆಗಳನ್ನು ವಿತರಿಸಲಾಯಿತು   

ಶ್ರೀರಂಗಪಟ್ಟಣ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮನಸೋ ಇಚ್ಛೆ ಪಟಾಕಿಗಳನ್ನು ಸಿಡಿಸಿ ತೊಂದರೆ ಅನುಭವಿಸುವ ಬದಲು ಅಪಾಯಕಾರಿ ಪಟಾಕಿಗಳಿಂದ ದೂರ ಇರಬೇಕು ಎಂದು ಗ್ರಾಮ ಡಿಜಿ ವಿಕಸನ ಸಂಸ್ಥೆಯ ಸಂಯೋಜಕ ಕುಮಾರಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಡಿಜಿ ವಿಕಸನ ಸಂಸ್ಥೆ ಮತ್ತು ಬಲ್ಲೇನಹಳ್ಳಿ ಗ್ರಾ.ಪಂ. ಡಿಜಿಟಲ್‌ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಬುಧವಾರ ಏರ್ಪಡಿಸಿದ್ದ ದೀಪಾವಳಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಹಣತೆಗಳನ್ನು ವಿತರಿಸಿ ಅವರು ಮಾತನಾಡಿದರು. ದೀಪಗಳನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಬೇಕು. ಪಟಾಕಿ ಹಚ್ಚಲೇಬೇಕು ಎನ್ನುವುದಾದರೆ ಅಪಾಯಕಾರಿಯಲ್ಲದೆ ಪಟಾಕಿಗಳನ್ನು ಹಚ್ಚಬೇಕು. ಮಾಲಿನ್ಯ ಉಂಟು ಮಾಡದ ಹಸಿರು ಪಟಾಕಿಗಳನ್ನು ಬಳಸಬೇಕು ಎಂದು ಅವರು ತಿಳಿಸಿದರು.

ಬಲ್ಲೇನಹಳ್ಳಿ ಗ್ರಾ.ಪಂ. ಡಿಜಿಟಲ್‌ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕ ಕೂಡಲಕುಪ್ಪೆ ಸೋಮಶೇಖರ್‌ ಮಾತನಾಡಿ, ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ. ಹಾಗಾಗಿ ಮಣ್ಣಿನ ಹಣತೆಗಳನ್ನು ಬಳಸುವುದು ಒಳಿತು ಎಂದರು.

ADVERTISEMENT

ಮುಖಂಡ ಮರಿಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ಸಹ ಶಿಕ್ಷಕರಾದ ಶ್ರೀನಿವಾಸಾಚಾರಿ, ಲಕ್ಷ್ಮಿ, ಸಾಗರ್‌, ಸವಿತಾ, ದಿವ್ಯ, ನಾಗೇಂದ್ರು ಇದ್ದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.