ADVERTISEMENT

ಶ್ರೀರಂಗಪಟ್ಟಣ: ಮಾನವ ಸರಪಳಿಗೆ ಗೂಡ್ಸ್‌ ವಾಹನದಲ್ಲಿ ಮಕ್ಕಳ ಸಾಗಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 20:52 IST
Last Updated 15 ಸೆಪ್ಟೆಂಬರ್ 2024, 20:52 IST
ಶ್ರೀರಂಗಪಟ್ಟಣ ಸಮೀಪದ ಗಂಜಾಂ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಮಾನವ ಸರಪಳಿ ರಚಿಸಲು ವಿದ್ಯಾರ್ಥಿಗಳನ್ನು ಭಾನುವಾರ ಗೂಡ್ಸ್‌ ವಾಹನಗಳಲ್ಲಿ ಕರೆತರಲಾಯಿತು
ಶ್ರೀರಂಗಪಟ್ಟಣ ಸಮೀಪದ ಗಂಜಾಂ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಮಾನವ ಸರಪಳಿ ರಚಿಸಲು ವಿದ್ಯಾರ್ಥಿಗಳನ್ನು ಭಾನುವಾರ ಗೂಡ್ಸ್‌ ವಾಹನಗಳಲ್ಲಿ ಕರೆತರಲಾಯಿತು   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಮಾನವ ಸರಪಳಿ ರಚಿಸಲು ವಿದ್ಯಾರ್ಥಿಗಳನ್ನು ಗೂಡ್ಸ್‌ ವಾಹನಗಳಲ್ಲಿ ಸಾಗಿಸಲಾಯಿತು.

‘ತಾಲ್ಲೂಕಿನ ಬಳ್ಳೇಕೆರೆ, ಹುಲಿಕೆರೆ ಇತರ ಶಾಲೆಗಳ ವಿದ್ಯಾರ್ಥಿಗಳನ್ನು ತರಕಾರಿ, ಇತರ ಸರಕು ಸರಂಜಾಮು ಸಾಗಿಸುವ ವಾಹನಗಳಲ್ಲಿ ಕರೆತರಲಾಗಿತ್ತು. 10 ಮಂದಿ ನಿಲ್ಲಬಹುದಾದ ಗೂಡ್ಸ್‌ ವಾಹನದಲ್ಲಿ ದುಪ್ಪಟ್ಟು ವಿದ್ಯಾರ್ಥಿಗಳನ್ನು ತುಂಬಲಾಗಿತ್ತು. ಬಳ್ಳೇಕೆರೆಯಿಂದ ವಿದ್ಯಾರ್ಥಿಗಳನ್ನು ಕರೆತಂದ ವಾಹನದಲ್ಲಿ ಮಿಸುಕಾಡಲೂ ಜಾಗ ಇರಲಿಲ್ಲ. ಇಂತಹ ವಾಹನಗಳಲ್ಲಿ ಬಾಲಕಿಯರು 15ರಿಂದ  20 ಕಿ.ಮೀ. ದೂರದಿಂದ ನಿಂತುಕೊಂಡೇ ಬಂದಿದ್ದರು’ ಎಂದು ಸ್ಥಳೀಯರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT