ADVERTISEMENT

ಶ್ರೀರಂಗಪಟ್ಟಣ | ವಾಹನ ಡಿಕ್ಕಿ: ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:33 IST
Last Updated 27 ಜೂನ್ 2024, 14:33 IST
   

ಶ್ರೀರಂಗಪಟ್ಟಣ: ವಾಹನ ಡಿಕ್ಕಿ ಹೊಡೆದು 3 ವರ್ಷ ಪ್ರಾಯದ ಗಂಡುಜಿಂಕೆಯೊಂದು ಮೃತಪಟ್ಟ ಘಟನೆ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಜಿಂಕೆಯು ಬೆಂಗಳೂರು– ಮೈಸೂರು ಹೆದ್ದಾರಿ ದಾಟುವ ಮುನ್ನ ಸರ್ವೀಸ್‌ ರಸ್ತೆಯಲ್ಲಿ ವಾಹನ ಡಿಕ್ಕಿ ಹೊಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.  ಜಿಂಕೆಯ ಕಳೇಬರದ ಪಂಚನಾಮೆ ನಡೆಸಿ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ನರ್ಸರಿ ಬಳಿ ಅದನ್ನು ಸುಡಲಾಯಿತು.

‘ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಮಧ್ಯೆ ಹಾದು ಹೋಗಿರುವ ಬೆಂಗಳೂರು– ಮೈಸೂರು ಹೆದ್ದಾರಿಯ ಎರಡೂ ಬದಿಯಲ್ಲಿ ತಂತಿ ಬೇಲಿ ಇದ್ದು ವನ್ಯ ಪ್ರಾಣಿಗಳು ರಸ್ತೆ ದಾಟಲು ಆಗುತ್ತಿಲ್ಲ. ವನ್ಯ ಜೀವಿಗಳ ಓಡಾಟಕ್ಕೆ ಗೌಡಹಳ್ಳಿ ಸಮೀಪ ವೈಲ್ಡ್‌ ಲೈಫ್‌ ಕಾರಿಡಾರ್‌ ನಿರ್ಮಿಸುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ADVERTISEMENT

ಶ್ರೀರಂಗಪಟ್ಟಣ: ವಾಹನ ಡಿಕ್ಕಿ ಹೊಡೆದು 3 ವರ್ಷ ಪ್ರಾಯದ ಗಂಡುಜಿಂಕೆಯೊಂದು ಮೃತಪಟ್ಟ ಘಟನೆ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಸುಮಾರು 3 ವರ್ಷ ಪ್ರಾಯದ ಗಂಡು ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಜಿಂಕೆ ಯುವ ಎಕ್ಸ್‌ಪ್ರೆಸ್‌ ವೇ ದಾಟುವ ಮುನ್ನ ಸರ್ವೀಸ್‌ ರಸ್ತೆಯಲ್ಲಿ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ. . ಜಿಂಕೆಯ ಕಳೇಬರದ ಪಂಚನಾಮೆ ನಡೆಸಿ ಬುಧವಾರ ಸಂಜೆ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ನರ್ಸರಿ ಬಳಿ ಅದನ್ನು ದಹಿಸಲಾಯಿತು. ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಮಧ್ಯೆ ಹಾದು ಹೋಗಿರುವ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ನ ಎರಡೂ ಬದಿಯಲ್ಲಿ ಬೇಲಿ ಇದ್ದು ವನ್ಯ ಪ್ರಾಣಿಗಳು ರಸ್ತೆ ದಾಟಲು ಆಗುತ್ತಿಲ್ಲ. ವನ್ಯ ಜೀವಿಗಳ ಓಡಾಟಕ್ಕೆ ಗೌಡಹಳ್ಳಿ ಸಮೀಪ ವೈಲ್ಡ್‌ ಲೈಫ್‌ ಕಾರಿಡಾರ್‌ ನಿರ್ಮಿಸುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.