ಮಳವಳ್ಳಿ: ರಾಜ್ಯ ಸರ್ಕಾರಿ ನೌಕರರ ಸಂಘದ ಮಳವಳ್ಳಿ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಗಳಿಗೆ ಪ್ರಾಥಮಿಕ ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಎಚ್.ಮಲ್ಲಿಕಾರ್ಜುನಯ್ಯ, ಎಚ್.ನಾಗೇಶ್, ಜಿ.ಎಸ್.ನಾಗರಾಜು, ಎಚ್.ಎಸ್.ಶಿವಶಂಕರ್ ಆಯ್ಕೆಯಾದರು.
ಪಟ್ಟಣದ ನೌಕರರ ಸಂಘದ ಕಚೇರಿ ಹಾಗೂ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕ್ಷೇತ್ರ ಸೇರಿದಂತೆ 11 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು.
ಪ್ರೌಢಶಾಲಾ ವಿಭಾಗ ವೈ.ಎಸ್.ಸ್ವಾಮಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎನ್.ಎಂ.ಪುಟ್ಟಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಬಿ.ಚಂದ್ರಶೇಖರ್, ಪದವಿ ಕಾಲೇಜು ಡಾ. ಶಂಕರೇಗೌಡ, ಕೃಷಿ ಇಲಾಖೆ ಕೆ.ನಳಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೆ.ಎಂ.ವಿನೋದ್ ಕುಮಾರ್, ನ್ಯಾಯಾಂಗ ಇಲಾಖೆ ರಾಜೇಶ್ ಚುನಾಯಿತರಾದರು.
ಅವಿರೋಧ ಆಯ್ಕೆ: ಅವಿರೋಧ ಆಯ್ಕೆ: ಸಂಘದ 34 ನಿರ್ದೇಶಕ ಸ್ಥಾನಗಳ ಪೈಕಿ ಒಂದು ಸ್ಥಾನ ಖಾಲಿ ಉಳಿದಿದೆ. ವಿವಿಧ ಇಲಾಖೆಗಳಿಂದ 22 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪಶುಪಾಲನ ಮತ್ತು ಪಶುವೈದ್ಯ ಇಲಾಖೆಯಿಂದ ಎನ್.ಎಸ್.ಗಂಗಾಧರಸ್ವಾಮಿ, ವೆಂಕಟಲಕ್ಷ್ಮಿ, ಕಂದಾಯ ಇಲಾಖೆ– ಎಚ್.ಆರ್.ದಿವಾಕರ್, ಎಂ.ಎಲ್.ಯೋಗೇಶ್, ಲೋಕೋಪಯೋಗಿ ಇಲಾಖೆ– ಡಿ.ಹರೀಶ್ ಕುಮಾರ್, ಪಂಚಾಯತ್ ರಾಜ್ ಇಲಾಖೆ– ಎಚ್.ಎಂ.ಅಶೋಕ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ– ಜೆ.ಚಂದ್ ವೀರ್, ಹಿಂದುಳಿದ ವರ್ಗಗಳ ಇಲಾಖೆ– ಸಿ.ಸೋಮಶೇಖರ್, ಅರಣ್ಯ ಇಲಾಖೆ– ಕೆ.ಎಸ್.ಬಸವರಾಜು ಅವಿರೋಧ ಆಯ್ಕೆಯಾಗಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ– ಎಂ.ಎಸ್.ಸಿದ್ದಲಿಂಗಮೂರ್ತಿ, ಶಿವಕುಮಾರ್, ರಾಮಮೂರ್ತಿ, ಎಂ.ಶಿವಶಂಕರ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ– ಎಸ್.ನಂದೀಶ್ ಕುಮಾರ್, ಖಜಾನೆ ಇಲಾಖೆ–ಎನ್.ಪಿ.ಮಾದಪ್ಪ, ಭೂಮಾಪನ ಮತ್ತು ನೋಂದಣಿ– ಎಂ.ಜಿ.ಪವನ್ ಲಿಂಗು, ಗ್ರಾಮೀಣ ಅಭಿವೃದ್ಧಿ ಪಂಚಾಯತ್ – ಶಿವಲಿಂಗೇಗೌಡ, ಎಸ್.ಎನ್.ಹರಿಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ–ಮಹದೇವಮ್ಮ, ಅಬಕಾರಿ ಇಲಾಖೆ– ಎಚ್.ಎಂ.ನವೀನ್ ಕುಮಾರ್, ಸಹಕಾರ ಇಲಾಖೆ– ಎಂ.ಸಿ.ಕುಮಾರ್, ಐಟಿಐ– ಕೆ.ಎನ್.ರವಿಕುಮಾರ್ ಅವಿರೋಧ ಆಯ್ಕೆಯಾಗಿದ್ದರು. ನಿವೃತ್ತ ಪ್ರಾಂಶುಪಾಲ ಜೆ.ಪಿ.ಪುಟ್ಟಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷ ಸ್ಥಾನ: ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಪ್ರಾಥಮಿಕ ಪ್ರಾಥಮಿಕ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಚ್.ಮಲ್ಲಿಕಾರ್ಜನಯ್ಯ, ಎಚ್.ನಾಗೇಶ್ ನಡುವೆ ಪೈಪೋಟಿ ಆರಂಭವಾಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇಬ್ಬರು ತಮ್ಮ ಹೇಳಿಕೆಯಲ್ಲಿ ಪ್ರತಿಷ್ಠೆ ಪ್ರದರ್ಶಿಸಿದರು. ಕಳೆದ ಹಲವು ವರ್ಷಗಳಿಂದ ಶಿಕ್ಷಣ ಇಲಾಖೆಯವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇತರೆ ಇಲಾಖೆಯಿಂದ ಆಯ್ಕೆಯಾದ ನಿರ್ದೇಶಕರಲ್ಲಿ ಇದು ಅಸಮಾಧಾನ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.