ADVERTISEMENT

ಮಳವಳ್ಳಿ | ತಾಂತ್ರಿಕ ನೆಪ; ಹರಾಜು ಪ್ರಕ್ರಿಯೆ ವಿಳಂಬ

ರೇಷ್ಮೆ ಬೆಳೆಗಾರರ ಆಕ್ರೋಶ; ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 12:30 IST
Last Updated 20 ಏಪ್ರಿಲ್ 2024, 12:30 IST
ಮಳವಳ್ಳಿ ತಾಲ್ಲೂಕಿನ ಬುಗತಗಹಳ್ಳಿ ಬಳಿಯ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ವಿಳಂಬವಾದ ಹಿನ್ನಲೆಯಲ್ಲಿ ರೈತರು ಮದ್ದೂರು-ಮಳವಳ್ಳಿ ರಸ್ತೆಗೆ ರೇಷ್ಮೆ ಗೂಡು ಸುರಿದು ಕೆಲಕಾಲ ಪ್ರತಿಭಟನೆ ನಡೆಸಿದರು
ಮಳವಳ್ಳಿ ತಾಲ್ಲೂಕಿನ ಬುಗತಗಹಳ್ಳಿ ಬಳಿಯ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ವಿಳಂಬವಾದ ಹಿನ್ನಲೆಯಲ್ಲಿ ರೈತರು ಮದ್ದೂರು-ಮಳವಳ್ಳಿ ರಸ್ತೆಗೆ ರೇಷ್ಮೆ ಗೂಡು ಸುರಿದು ಕೆಲಕಾಲ ಪ್ರತಿಭಟನೆ ನಡೆಸಿದರು   

ಮಳವಳ್ಳಿ: ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಹರಾಜು ಪ್ರಕ್ರಿಯೆ ವಿಳಂಬವಾದ ಹಿನ್ನಲೆಯಲ್ಲಿ ತಾಲ್ಲೂಕಿನ ಬುಗತಗಹಳ್ಳಿ ಬಳಿ ರೈತರು ಮದ್ದೂರು-ಮಳವಳ್ಳಿ ರಸ್ತೆಗೆ ರೇಷ್ಮೆಗೂಡು ಸುರಿದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಬುಗತಗಹಳ್ಳಿ ಬಳಿಯ ಸರ್ಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಹರಾಜು ಪ್ರಕ್ರಿಯೆ ತಾಂತ್ರಿಕ ಕಾರಣದಿಂದ ತಡವಾಯಿತು. ಇದರಿಂದ, ದಿಢೀರ್ ರಸ್ತೆಗೆ ಇಳಿದ ರೈತರು ರೇಷ್ಮೆ ಗೂಡು ಸುರಿದು ರಸ್ತೆ ತಡೆಗೆ ಮುಂದಾದರು. ಕೂಡಲೇ ಸ್ಥಳಕ್ಕೆ ಬಂದ ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ಶ್ರವಣ ಸ ದಾಸರಡ್ಡಿ ರೈತರನ್ನು ಮನವೊಲಿಸಿ ಮಾರುಕಟ್ಟೆಗೆ ಕರೆದುಕೊಂಡು ಬಂದು ಅಧಿಕಾರಿಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿದರು.

ತರಾಟೆ: ಇಂಟರ್‌ನೆಟ್ ಸಮಸ್ಯೆಯಿಂದ ಹರಾಜು ಪ್ರಕ್ರಿಯೆ ವಿಳಂಬವಾಗಿದೆ ಎಂದ ಮಾರುಕಟ್ಟೆ ಅಧಿಕಾರಿ ಸುರೇಶ್ ಅವರಿಗೆ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಸಾಕಷ್ಟು ಬಾರಿ ಇಂಥ ಸಮಸ್ಯೆ ಹಾಗೂ ದರ ಕುಸಿತದಿಂದ ರೈತರಿಗೆ ನಷ್ಟವಾಗುತ್ತಿದೆ ಎಂದುಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಕೆಲಕಾಲ ಅಧಿಕಾರಿಯ ಅಸಡ್ಡೆ ಉತ್ತರದಿಂದ ಕೋಪಕೊಂಡ ರೈತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಸಿಪಿಐ ಬಿ.ಎಸ್.ಶ್ರೀಧರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದೆ ಈತರದ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು.

ಮಾಹಿತಿ ತಿಳಿದು ಚುನಾವಣಾ ಕರ್ತವ್ಯದಲ್ಲಿದ್ದ ರೇಷ್ಮೆ ಸಹಾಯಕ ನಿರ್ದೇಶಕ ಸ್ವಾಮಿ ವಿವೇಕಾನಂದ ಮಾರುಕಟ್ಟೆ ಭೇಟಿ ನೀಡಿ ಹರಾಜು ಪ್ರಕ್ರಿಯೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.