ADVERTISEMENT

ಮಳವಳ್ಳಿ | ಭಾರಿ ಮಳೆಗೆ ದೇವಸ್ಥಾನ, ಶಾಲಾ ಆವರಣ ಜಲಾವೃತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:19 IST
Last Updated 29 ಸೆಪ್ಟೆಂಬರ್ 2024, 14:19 IST
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮಳವಳ್ಳಿ ತಾಲ್ಲೂಕಿನ ಕಂದೇಗಾಲದ ಸರ್ಕಾರಿ ಪ್ರೌಢಶಾಲಾ ಆವರಣ ಜಲಾವೃತಗೊಂಡಿರುವುದು
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮಳವಳ್ಳಿ ತಾಲ್ಲೂಕಿನ ಕಂದೇಗಾಲದ ಸರ್ಕಾರಿ ಪ್ರೌಢಶಾಲಾ ಆವರಣ ಜಲಾವೃತಗೊಂಡಿರುವುದು   

ಮಳವಳ್ಳಿ: ಪಟ್ಟಣದ ಸೇರಿದಂತೆ ತಾಲ್ಲೂಕಿನ ಹಲವೆಡೆ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕಂದೇಗಾಲದ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ, ಶಾಲೆ ಹಾಗೂ ಜಮೀನುಗಳು ಜಲಾವೃತವಾಗಿವೆ.

ಶನಿವಾರ ರಾತ್ರಿ 11ಕ್ಕೆ ಆರಂಭವಾದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಸುರಿಯಿತು. ಹಲವು ದಿನಗಳಿಂದ ಮಳೆ ಇಲ್ಲದೇ ಸಂಕಷ್ಟದಲ್ಲಿದ್ದ ರೈತರಿಗೆ ಶನಿವಾರ ಸುರಿದ ಮಳೆ ಹರ್ಷ ತಂದಿದೆ. ಮತ್ತೊಂದೆಡೆ ಭಾರಿಯಿಂದ ತಾಲ್ಲೂಕಿನ ಕಂದೇಗಾಲ-ಕಲ್ಲುವೀರನಹಳ್ಳಿ ಗ್ರಾಮಗಳ ಪ್ರಸಿದ್ಧ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದ ಆವರಣ ಸಂಪೂರ್ಣ ಜಲಾವೃತ್ತವಾಗಿದೆ. ಭಾನುವಾರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಅನಾನುಕೂಲವಾಯಿತು.

ಮೊಳೆದೊಡ್ಡಿ, ಕಲ್ಲುವೀರನಹಳ್ಳಿ, ಕಂದೇಗಾಲ ಸೇರಿದಂತೆ ಹಲವೆಡೆ ಮಳೆಯಿಂದಾಗಿ ರೈತರ ಜಮೀನುಗಳು ಜಲಾವೃತ್ತವಾಗಿವೆ. ಸರ್ಕಾರಿ ಪ್ರೌಢಶಾಲೆಯ ಆವರಣ ಸಹ ಜಲಾವೃತ್ತವಾಗಿ ಸುಮಾರು 2 ಅಡಿಯಷ್ಟು ನೀರು ನಿಂತಿದೆ. ಹಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ದೇವಸ್ಥಾನದ, ಶಾಲೆಯ ಸಂಪರ್ಕದ ರಸ್ತೆಗಳಲ್ಲೂ ನೀರು ನಿಂತಿದೆ.

ADVERTISEMENT
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮಳವಳ್ಳಿ ತಾಲ್ಲೂಕಿನ ಕಂದೇಗಾಲ-ಕಲ್ಲುವೀರನಹಳ್ಳಿಯ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ ಆವರಣ ಜಲಾವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.