ADVERTISEMENT

ಟೆನಿಸ್: ಬೆಂಗಳೂರು, ಮಂಡ್ಯ ಚಾಂಪಿಯನ್‌

ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆದ್ದ ಮಂಗಳೂರು ತಂಡ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:21 IST
Last Updated 14 ಜೂನ್ 2024, 15:21 IST
ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ವಿಜೇತರಾದ ಮಂಗಳೂರಿನ ಪಿ.ಎ. ಎಂಜಿನಿಯರಿಂಗ್‌ ಕಾಲೇಜು ತಂಡದವರು ಬಹುಮಾನ ಪಡೆದರು 
ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ವಿಜೇತರಾದ ಮಂಗಳೂರಿನ ಪಿ.ಎ. ಎಂಜಿನಿಯರಿಂಗ್‌ ಕಾಲೇಜು ತಂಡದವರು ಬಹುಮಾನ ಪಡೆದರು    

ಮಂಡ್ಯ: ಇಲ್ಲಿ ನಡೆದ ರಾಜ್ಯಮಟ್ಟದ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜು ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಮಂಡ್ಯದ ಪಿ.ಇ.ಎಸ್‌. ಎಂಜಿನಿಯರಿಂಗ್‌ ತಂಡ ಪ್ರಥಮ ಸ್ಥಾನ ಪಡೆದು ಬಹುಮಾನ ಗಳಿಸಿದವು. 

ಮಂಡ್ಯದ ಪೀಪಲ್ಸ್ ಎಜುಕೇಶನ್ ಟ್ರಸ್ಟ್ ಮತ್ತು ಪಿ.ಇ.ಎಸ್ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿ ಜೂನ್‌ 11ರಿಂದ 14ರವರೆಗೆ ‘ವಿ.ಟಿ.ಯು ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಿಭಾಗದ ಟೆನಿಸ್‌ ಹಾಗೂ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ ನಡೆಯಿತು. 

ಪುರುಷರ ವಿಭಾಗದ ರೆಸ್ಟ್ ಆಫ್ ಬೆಂಗಳೂರು ಟೆನಿಸ್‌ ಟೂರ್ನಿಯಲ್ಲಿ ಪ್ರಥಮ ಸ್ಥಾನವನ್ನು ಮೈಸೂರಿನ ವಿದ್ಯಾವರ್ಧಕ ಕಾಲೇಜು, ದ್ವಿತೀಯ ಸ್ಥಾನವನ್ನು ಮೈಸೂರಿನ ಎನ್.ಐ.ಇ ಕಾಲೇಜು ತಂಡ ಗಳಿಸಿತು.

ADVERTISEMENT

ಪುರುಷರ ವಿಭಾಗದ ಮೈಸೂರು ವಿಭಾಗದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜು ತಂಡ ಪ್ರಥಮ ಸ್ಥಾನವನ್ನು, ದ್ವಿತೀಯ ಸ್ಥಾನವನ್ನು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡ ಗಳಿಸಿತು. 

ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರಿನ ಪಿ.ಎ. ಎಂಜಿನಿಯರಿಂಗ್ ಕಾಲೇಜು ಮತ್ತು ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಎನ್.ಎಂ.ಐ.ಟಿ ಕಾಲೇಜು ತಂಡಗಳು ಗಳಿಸಿದವು.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಚ್.ಎಂ. ನಂಜುಂಡಸ್ವಾಮಿ ವಿಜೇತ ತಂಡಗಳಿಗೆ 25 ಗ್ರಾಂ ಬೆಳ್ಳಿ ಪದಕ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ವಿಟಿಯು ಮೈಸೂರು ವಿಭಾಗಾಧಿಕಾರಿ ಮುರಳೀಧರ ಎಂ.ಪಿ., ಕ್ರೀಡಾ ಸಮಿತಿ ಸದಸ್ಯ ವಿಶ್ವನಾಥ ಸಿ.ಎನ್, ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯ ರೆಫ್ರಿ ಬೋರ್ಡ್ ಕಾರ್ಯದರ್ಶಿ ಸಂಜಯ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಅನಂತಪದ್ಮನಾಭ ಪ್ರಭು, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕಿ ವಿದ್ಯಾ ಆರ್. ವಿ ಹಾಗೂ ಕಾಲೇಜಿನ ಇತರೆ ಸದಸ್ಯರು ಹಾಜರಿದ್ದರು.

ಟೂರ್ನಿಯಲ್ಲಿ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 22 ಟೆನಿಸ್‌ ತಂಡಗಳು ಹಾಗೂ 21 ಫುಟ್‌ಬಾಲ್‌ ತಂಡಗಳು ಭಾಗವಹಿಸಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.