ಮೇಲುಕೋಟೆ: ಸಮೀಪದ ನಾರಾಯಣಪುರದ ಬರಡು ನೆಲದ ಹೊಲದಲ್ಲಿ ಒಂದೆರಡು ಅಡಿ ಆಳ ತೆಗೆದ ಕುಂಡಿಕೆಯಲ್ಲಿ ಸೋಮವಾರ ತೀರ್ಥೋದ್ಭವವಾಗಿದೆ.
ಚೆಲುವನಾರಾಯಣಸ್ವಾಮಿಯ ಜಯಂತಿಯ ಅಂಗವಾಗಿ ಮಧ್ಯಾಹ್ನ 11ರ ಸುಮಾರಿಗೆ ಮೇಲುಕೋಟೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಆರಂಭವಾದ ತಕ್ಷಣ ನಾರಾಯಣಪುರದಲ್ಲಿ ಪೂಜೆ ಮಾಡಿ ಒಂದೆರಡು ಅಡಿ ಆಳದ ಗುಂಡಿ ತೋಡಲಾಯಿತು.
ಇದೇ ವೇಳೆ ಚೆಲುವನಾರಾಯಣನ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿ ಕುಂಡಿಕೆಗೆ ಪೂಜೆ ನಡೆಸಿ ಪ್ರಾರ್ಥಿಸಲಾಯಿತು. ಗ್ರಾಮಸ್ಥರು ಪೂಜೆ ನೆರವೇರಿಸಿ ತೀರ್ಥ ಸ್ವೀಕರಿಸಿದರು. ತೀರ್ಥಕ್ಕೆ ಬಂದ ಭಕ್ತರಿಗೆ ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು.
ನಾರಾಯಣಪುರದ ಅನಿಲ್ ಕುಮಾರ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು. ಪಾಂಡವಪುರ ಎಸ್.ಐ ಪ್ರಭಾಕರ್ ತೀರ್ಥೋದ್ಭವ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.