ADVERTISEMENT

ಶ್ರೀಲಂಕಾ ಯೋಗ ಫೆಸ್ಟಿವಲ್‌ಗೆ ತ್ರಿನೇತ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:07 IST
Last Updated 11 ಜುಲೈ 2024, 15:07 IST
ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ   

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಜುಲೈ 13ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಕ್ಯಾಂಡಿಯ ಫ್ಯಾಮಿಲಿ ಯೋಗ ಅಕಾಡೆಮಿ ಮತ್ತು ಬೆಂಗಳೂರಿನ ರೋಟರಿ ಬೆಂಗಳೂರು ಗ್ಲೋಬಲ್‌ ಯೋಗ ವತಿಯಿಂದ ಭಾರತ– ಲಂಕಾ ಗ್ಲೋಬಲ್‌ ಯೋಗ ಫೆಸ್ಟಿವಲ್‌ ನಡೆಯಲಿದೆ.

ಕ್ರೀಡೆಯಲ್ಲಿ ಯೋಗ, ವಿಜ್ಞಾನ ಯೋಗ, ಯೋಗಾಸನ ಜೋಡಣೆ, ಮಹಿಳೆಯರಿಗೆ ಯೋಗ, ಮುದ್ರೆ ಮತ್ತು ಬಂಧ, ಚಕ್ರ ಮತ್ತು ಸೆಳವು, ಯೋಗ ಮತ್ತು ಸಂಗೀತ ಚಿಕಿತ್ಸೆ ಎಂಬ ವಿಷಯಗಳ ಕುರಿತು ನಡೆಯಲಿರುವ ಯೋಗ ಸೆಮಿನಾರ್‌ನಲ್ಲಿ ಸ್ವಾಮೀಜಿ ವಿಷಯ ಮಂಡಿಸಲಿದ್ದಾರೆ.

ADVERTISEMENT

ಪ್ರವಾಸೋದ್ಯಮ ಮತ್ತು ಭೂಮಿ ಸಚಿವಾಲಯ ಹಾಗೂ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯದ ಹರಿನ್‌ ಫೆರ್ನಾಂಡೊ, ಅಂತರರಾಷ್ಟ್ರೀಯ ಯೋಗ ತಜ್ಞ ರಾಘವೇಂದ್ರ ಪೈ, ರೋಟರಿ ಬೆಂಗಳೂರು ಗ್ಲೋಬಲ್‌ ಯೋಗದ ಸಂಸ್ಥಾಪಕ ಡಾ.ಯೋಗಿರಾಜ್‌, ನಿವೃತ್ತ ಆಯುಷ್‌ ಅಧಿಕಾರಿ ಡಾ.ನಾಗೇಶ್‌, ಡಾ.ಮಧುಮತಿ, ವಿಶ್ವನಾಥ್‌ ಗುರೂಜಿ ಪಾಲ್ಗೊಳ್ಳಲಿದ್ದಾರೆ ಎಂದು ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.