ADVERTISEMENT

ಮದ್ದೂರಿನ ಪ್ರವಾಸಿ ಮಂದಿರ ಮೇಲ್ದರ್ಜೆಗೆ: ಶಾಸಕ ಉದಯ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 14:36 IST
Last Updated 10 ಆಗಸ್ಟ್ 2024, 14:36 IST
ಮದ್ದೂರಿನ ಮಳವಳ್ಳಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಶನಿವಾರ ಬಂದಿದ್ದ ಸರ್ಕಾರದ ಮುಖ್ಯ ವಾಸ್ತು ಶಿಲ್ಪಿಗಳಾದ ರಾಮಸ್ವಾಮಿ ಹಾಗೂ ಶ್ರೀಧರ್‌ರೊಂದಿಗೆ ಶಾಸಕ ಕೆ.ಎಂ.ಉದಯ್ ನೂತನ ಕಟ್ಟಡಗಳ ಶೈಲಿಗಳ ಬಗ್ಗೆ ಚರ್ಚಿಸಿದರು
ಮದ್ದೂರಿನ ಮಳವಳ್ಳಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಶನಿವಾರ ಬಂದಿದ್ದ ಸರ್ಕಾರದ ಮುಖ್ಯ ವಾಸ್ತು ಶಿಲ್ಪಿಗಳಾದ ರಾಮಸ್ವಾಮಿ ಹಾಗೂ ಶ್ರೀಧರ್‌ರೊಂದಿಗೆ ಶಾಸಕ ಕೆ.ಎಂ.ಉದಯ್ ನೂತನ ಕಟ್ಟಡಗಳ ಶೈಲಿಗಳ ಬಗ್ಗೆ ಚರ್ಚಿಸಿದರು   

ಮದ್ದೂರು: 'ಪಟ್ಟಣದಲ್ಲಿರುವ ಪ್ರವಾಸಿ ಮಂದಿರವನ್ನು ಮೇಲ್ದರ್ಜೆಗೇರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಶಾಸಕ ಕೆ.ಎಂ ಉದಯ್ ತಿಳಿಸಿದರು.

ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಶನಿವಾರ ಸರ್ಕಾರದ ಮುಖ್ಯ ವಾಸ್ತು ಶಿಲ್ಪಿಗಳು ಬಂದು ಕೈಗೊಳ್ಳಬೇಕಾಗಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿದ ನಂತರ ಈ ಬಗ್ಗೆ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಟ್ಟಣದ ಪ್ರವಾಸಿ ಮಂದಿರವು ಮೈಸೂರು– ಬೆಂಗಳೂರು ಹೆದ್ದಾರಿಯ ನಡುವೆ ಇರುವುದರಿಂದ ಹಲವಾರು ಗಣ್ಯರು ಆಗಮಿಸುತ್ತಾರೆ. ಆದರೆ ಒಂದು ಕಟ್ಟಡವನ್ನು ಹೊರತುಪಡಿಸಿದರೆ ಉಳಿದ ಕಟ್ಟಡಗಳು ಹಳೆಯದಾಗಿರುವುದರಿಂದ ಅವುಗಳ ಜಾಗದಲ್ಲಿ ನೂತನವಾದ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು, ಆ ಸಲುವಾಗಿಯೇ ಈ ಬಗ್ಗೆ ನೀಲನಕ್ಷೆಯನ್ನು ಹಾಗೂ ಅಂದಾಜು ಪಟ್ಟಿಯನ್ನು ತಯಾರಿಸಿ ಬಳಿಕ ಇತರೆ ಸಿದ್ಧತೆಯನ್ನು ಕೈಗೊಳ್ಳಲು ಅಧಿಕಾರಿಗಳು ಬಂದಿದ್ದಾರೆ’ ಎಂದರು.

ADVERTISEMENT

ಈ ವೇಳೆ ಲೋಕೋಪಯೋಗಿ ಮುಖ್ಯ ವಾಸ್ತು ಶಿಲ್ಪಿಗಳಾದ ರಾಮಸ್ವಾಮಿ, ಶ್ರೀಧರ್, ಲೋಕೋಪಯೋಗಿ ಇಲಾಖೆಯ ಎಇ ಹರ್ಷ, ಎಇಇ ದೇವಾನಂದ್, ಉಪ ವಾಸ್ತು ಶಿಲ್ಪಿ ರಾಜೇಶ್ವರಿ , ಮುಖಂಡರಾದ ತಿಮ್ಮೆಗೌಡ, ಕೊಕ್ಕರೆ ಶಿವು, ಯರಗನಹಳ್ಳಿ ಹರೀಶ್  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.