ADVERTISEMENT

ಸಂಸತ್‌ನಲ್ಲೂ ಜಿಂದಾಲ್‌ ವಿಚಾರ ಪ್ರಸ್ತಾಪ: ಯಡಿಯೂರಪ್ಪ

ಧರಣಿಗೆ ಮುನ್ನ ಮಾತುಕತೆಗೆ ಕರೆಯಬೇಕಿತ್ತು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 18:16 IST
Last Updated 17 ಜೂನ್ 2019, 18:16 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಮೈಸೂರು: ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ, ಪಕ್ಷವು ಸಂಸತ್ತಿನಲ್ಲೂ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಂದಾಲ್‌ ವಿಚಾರದಲ್ಲಿ ರಾಜ್ಯ ಸರ್ಕಾರ ಇದುವರೆಗೆ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ’ ಎಂದರು.

‘ನಮ್ಮ ಧರಣಿಯನ್ನು ಮುಖ್ಯಮಂತ್ರಿ ಬಹಳ ಹಗುರವಾಗಿ ಪರಿಗಣಿಸಿದ್ದಾರೆ. ಧರಣಿ ನಡೆಸಿ ಮೆರವಣಿಗೆಗೆ ಮುಂದಾದಾಗ ಮಾತುಕತೆಗೆ ಆಹ್ವಾನಿಸಿದ್ದಾರೆ. ಪ್ರತಿಭಟನೆ ನಡೆಸುವುದಾಗಿ ವಾರದ ಮೊದಲೇ ಹೇಳಿದ್ದೆ. ಈ ವಿಚಾರ ರಾಜ್ಯದ ಜನರಿಗೂ ಗೊತ್ತಿತ್ತು. ಈಗ ಯಡಿಯೂರಪ್ಪ ಸಹಕಾರ ಕೊಡುವುದಿಲ್ಲ, ರಾಜಕಾರಣ ಮಾಡುತ್ತಿದ್ದಾರೆ ಎಂದು ಈಗ ಆರೋಪ ಮಾಡಿದರೆ ಹೇಗೆ? ಇದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಆರಂಭದಲ್ಲೇ ಮಾತುಕತೆಗೆಕರೆದಿದ್ದರೆ ಪ್ರತಿಭಟನೆಯ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ, ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ಇದರಿಂದ ಅವರೇನೂ ಸಾಧಿಸುವುದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡಲು ನನಗೆ ಆಸಕ್ತಿ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.