ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ದಸರಾ ಅವಧಿಯಲ್ಲಿ ಅಂದರೆ ಅ.3ರಿಂದ 12ರವರೆಗೆ 1,79,714 ಸಂದರ್ಶಕರು ಭೇಟಿ ನೀಡಿದ್ದಾರೆ. ಹೋದ ವರ್ಷ ಇದೇ ಅವಧಿಯಲ್ಲಿ 1,83,002 ಮಂದಿ ಬಂದಿದ್ದರು. 2022ರಲ್ಲಿ 1,69,993 ಪ್ರವಾಸಿಗರು ಆಗಮಿಸಿದ್ದರು.
ಈ 10 ದಿನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು (36,467) ವಿಜಯದಶಮಿಯಂದು ಭೇಟಿ ನೀಡಿದ್ದಾರೆ.
ಆಯುಧ ಪೂಜೆ ಹಾಗೂ ವಿಜಯದಶಮಿಯ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದು, 2022ರಲ್ಲಿ ಆಯುಧ ಪೂಜೆ ದಿನ 25,236 ಹಾಗೂ ವಿಜಯದಶಮಿಯಂದು 38,751 ಪ್ರವಾಸಿಗರು ಭೇಟಿ ನೀಡಿದ್ದರೆ, 2023ರ ಆಯುಧ ಪೂಜೆ ದಿವಸ 31,515, ವಿಜಯದಶಮಿಯಂದು 26,370 ಹಾಗೂ 2024ರ ಆಯುಧ ಪೂಜೆಯಂದು 23,382 ಹಾಗೂ ವಿಜಯದಶಮಿಯಂದು 36,467 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ವರ್ಷಗಳಲ್ಲಿ ಏಪ್ರಿಲ್‌ನಿಂದ–ಸೆಪ್ಟೆಂಬರ್ ಅವಧಿಯಲ್ಲಿ 51,91,762 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.