ADVERTISEMENT

ಉದ್ಯೋಗ ನೀಡುವುದಾಗಿ ನಂಬಿಸಿ ₹11.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:40 IST
Last Updated 13 ನವೆಂಬರ್ 2024, 16:40 IST

ಮೈಸೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಾಪಣ್ಣ ಬಡಾವಣೆ ನಿವಾಸಿ ಆದರ್ಶ್ ಎಂಬಾತ ಧನಗಳ್ಳಿ ನಿವಾಸಿ ಆರ್. ದೀಕ್ಷಿತ್‌ ಅವರಿಂದ ₹11.50 ಲಕ್ಷ ಪಡೆದು ವಂಚಿಸಿದ್ದಾನೆ.

ನಗರದ ಮೆಗಾ ಡೇರಿಯಲ್ಲಿ ಆದರ್ಶ್ ಕೆಲಸ ಮಾಡುತ್ತಿದ್ದ. ದೀಕ್ಷಿತ್‌ ಅವರೂ ಅಲ್ಲಿಯೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಮಂಡ್ಯ ಡೇರಿಯಲ್ಲಿ ವಿಸ್ತರಣಾಧಿಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಹಣ ಪಡೆದಿದ್ದ.

ನಂತರ ನಕಲಿ ನೇಮಕಾತಿ ಪತ್ರವೊಂದನ್ನು ಸೃಷ್ಟಿಸಿ, ದೀಕ್ಷಿತ್‌ ಅವರಿಗೆ ಕಳಿಸಿ, ‘ಒಂದು ತಿಂಗಳ ನಂತರ ನಿನಗೆ ಅಂಚೆ ಮೂಲಕ ನೇಮಕಾತಿ ಪತ್ರ ಬರುತ್ತದೆ. ಇದು ಗೋಪ್ಯ ಮಾಹಿತಿ. ಯಾರಿಗೂ ತಿಳಿಸಬೇಡ’ ಎಂದು ಹೇಳಿದ್ದ. ಆತ ಹೇಳಿದ ಅವಧಿ ಕಳೆದರೂ ನೇಮಕಾತಿ ಪತ್ರ ಬರದಿದ್ದಾಗ ದೀಕ್ಷಿತ್‌ ತಂದೆ ರಾಮಸ್ವಾಮಿ ಮಂಡ್ಯದ ಡೇರಿಗೆ ತೆರಳಿ ವಿಚಾರಿಸಿದಾಗ ಅದು ನಕಲಿ ಪತ್ರ ಎಂದು ಗೊತ್ತಾಗಿದೆ. ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಗಾಂಜಾ ಸಂಗ್ರಹ: ಇಬ್ಬರ ಬಂಧನ

ಮೈಸೂರು: ಕಲ್ಯಾಣಗಿರಿಯ ಕೆ.ಎಚ್.ಬಿ ಕಾಲೊನಿಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟಿದ್ದ ಮನೆಗೆ ದಾಳಿ ನಡೆಸಿದ ಉದಯಗಿರಿ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 154 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸೈಯದ್‌ ವಸೀಮ್ (32), ಯಾಸ್ಮಿನ್ ತಾಜ್‌ (52) ಬಂಧಿತ ಆರೋಪಿಗಳು. ದಾಳಿ ಮಾಡಿದ ಪೊಲೀಸರಿಗೆ 8 ಪ್ಲಾಸ್ಟಿಕ್‌ ಚೀಲದಲ್ಲಿ ಹಲವು ಪೊಟ್ಟಣಗಳನ್ನಿಟ್ಟಿದ್ದ ಗಾಂಜಾ ಪತ್ತೆಯಾಗಿದೆ. ‘ವಿಚಾರಣೆ ನಡೆಸಿದಾಗ ಇವರಿಗೆ ಗಾಂಜಾ ನೀಡುತ್ತಿದ್ದ ಪ್ರಮುಖ ಆರೋಪಿಯ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಉದಯಗಿರಿ ಠಾಣೆಯ ಇನ್‌ಸ್ಪೆಕ್ಟರ್‌ ಕೆ.ಎನ್. ಸುಧಾಕರ್, ಸಬ್‌ ಇನ್‌ಸ್ಪೆಕ್ಟರ್‌ ಸಿ.ಎನ್‌.ಸುನೀಲ್, ಎಚ್‌.ಎಂ.ಆನಂದ್, ಬಿ.ಜಿ.ನಾಗರಾಜ ನಾಯಕ, ಸಿ.ಎಂ.ರೂಪೇಶ್, ಸಿಬ್ಬಂದಿ ಸಿ.ರಾಜು, ಮಹೇಶ, ಶಿವಪ್ರಸಾದ್, ರಾಜೇ ಸಾಬ್, ಕರಿಯಪ್ಪ, ಪ್ರಕಾಶ್ ರಾಠೋಡ್, ಸಂತೋಷ್ ಪವಾರ್, ಸುಹೇಲ್, ರಾಜೇಶ್, ಆದಶ್, ನಂದಿತ, ನಾಜೀಯಾ ಶರೀಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.