ADVERTISEMENT

ಹುಣಸೂರು | ನಗರಸಭೆಗೆ ₹45 ಲಕ್ಷದ ವಾಹನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:21 IST
Last Updated 10 ಜುಲೈ 2024, 15:21 IST
ಹುಣಸೂರು ನಗರಸಭೆ ಹೊಸದಾಗಿ ಖರೀದಿಸಿದ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನಕ್ಕೆ ಬುಧವಾರ ಶಾಸಕ ಜಿ.ಡಿ.ಹರೀಶ್ ಗೌಡ ಮತ್ತು ಆಯುಕ್ತೆ ಮಾನಸ ಹಸಿರು ನಿಶಾನೆ ತೋರಿದರು
ಹುಣಸೂರು ನಗರಸಭೆ ಹೊಸದಾಗಿ ಖರೀದಿಸಿದ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನಕ್ಕೆ ಬುಧವಾರ ಶಾಸಕ ಜಿ.ಡಿ.ಹರೀಶ್ ಗೌಡ ಮತ್ತು ಆಯುಕ್ತೆ ಮಾನಸ ಹಸಿರು ನಿಶಾನೆ ತೋರಿದರು   

ಹುಣಸೂರು: ‘ಒಳಚರಂಡಿ ನಿರ್ವಹಣೆಗೆ ₹ 45 ಲಕ್ಷ ಅನುದಾನದಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯ ಹೊಂದಿರುವ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನ ಖರೀದಿಸುವ ಮೂಲಕ ನಗರಸಭೆಯೂ ಶುಚಿತ್ವಕ್ಕೆ ಕ್ರಮವಹಿಸಿದೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿ, ‘ನಗರಸಭೆಗೆ ‘ನಾನ್ ಮಿಲಿಯನ್ ಪ್ಲಸ್ ಸಿಟಿ ಯೋಜನೆ’ ಅಡಿಯಲ್ಲಿ ₹ 90 ಲಕ್ಷ ಅನುದಾನ ಮಂಜೂರಾಗಿದ್ದು, ಆ ಅನುದಾನದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಲೀಟರ್ ಸಾಮರ್ಥ್ಯದ ವಾಹನ ಖರೀದಿಸಿದೆ. ಉಳಿದ ಅನುದಾನವನ್ನು ನಗರಸಭೆ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗೆ ಮತ್ತು ನೀರು ಪೈಪ್ ಲೈನಿಂಗ್ ಮತ್ತು ಪಂಪ್ ಹೌಸ್ ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ’ ಎಂದರು.

‘ಈ ವಾಹನದಿಂದ ನಗರವ್ಯಾಪ್ತಿಯಲ್ಲಿ ಒಳಚರಂಡಿ ಶುಚಿಗೊಳಿಸಿ ನೀರು ಸಮರ್ಪಕವಾಗಿ ಹರಿಯಲು ಸಹಕಾರಿಯಾಗಲಿದೆ. ನಗರಸಭೆ ವ್ಯಾಪ್ತಿಯು 4 ರಿಂದ 5 ಕಿ.ಮೀ. ಹರಡಿಕೊಂಡಿದ್ದು, 80 ಹೊಸ ಬಡಾವಣೆಗಳಾಗಿವೆ. ಹಾಗಾಗಿ ಸಾರ್ವಜನಿಕರ ಸಮಸ್ಯೆಗೆ ಈ ಹೆಚ್ಚುವರಿ ವಾಹನ ಸಹಕಾರಿ ಆಗಲಿದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಮಾನಸ, ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಸತೀಶ್ ಕುಮಾರ್, ರಮೇಶ್, ದೇವರಾಜ್, ಯುನಿಸ್, ಗೀತಾ, ರಾಣಿ ಪೆರುಮಾಳ್, ರಾಧಾ, ಶ್ರೀನಾಥ್, ತಹಶೀಲ್ದಾರ್ ಮಂಜುನಾಥ್, ಇಒ ಮನು, ಎಇಇ ಶರ್ಮಿಳಾ, ರೂಪಾ, ಸತೀಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.