ಮೈಸೂರು: ‘ಟಿಪ್ಪು ನಿಜ ಕನಸುಗಳು’ ನಾಟಕದ ಮೂಲಕ ವಿವಾದ ಸೃಷ್ಟಿಸಿದ್ದ, ರಂಗಾಯಣದ ನಿಕಟಪೂರ್ವ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ತಮ್ಮ ‘ಸೃಷ್ಟಿ ಕೊಡವ ರಂಗ’ ಟ್ರಸ್ಟ್ ಅನ್ನು ರೆಪರ್ಟರಿ ತಂಡವಾಗಿ ರೂಪಿಸಿದ್ದು, ತಂಡವು ಆ.15ರಂದು ‘ವೀರ ಸಾವರ್ಕರ್’ ನಾಟಕವನ್ನು ಪ್ರದರ್ಶಿಸಲಿದೆ.
‘ವೀರ ಸಾವರ್ಕರ್ ಅವರ ಹೋರಾಟದ ಕುರಿತು ಓದುತ್ತಿದ್ದಾಗ, ಅವರನ್ನು ಕೇಂದ್ರೀಕರಿಸಿದ ನಾಟಕ ಇಲ್ಲಿವರೆಗೂ ಪ್ರದರ್ಶನವಾಗಿಲ್ಲವೆಂಬುದು ಅರಿವಿಗೆ ಬಂತು‘ ಎಂದು ಕಾರ್ಯಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಜೂನ್ 15ರೊಳಗಾಗಿ ಶಶಾಂಕ್ ಹಾಗೂ ರೋಹಿತ್ ಚಕ್ರತೀರ್ಥ ಅವರ ಅಯೋಧ್ಯಾ ಪ್ರಕಾಶನವು ನಾಟಕವನ್ನು ಪ್ರಕಟಿಸಲಿದೆ. ನಗರದ ಮಾಧವ ಕೃಪಾದಲ್ಲಿ ತಾಲೀಮು ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದಾದ್ಯಂತ 100 ಪ್ರದರ್ಶನ ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಸಂಬಳ, ಸೆಟ್, ಉಪಕರಣಗಳು, ಸಾರಿಗೆ ಮತ್ತು ಇತರ ವೆಚ್ಚಗಳ ಬಗ್ಗೆ ಸಮಾನ ಮನಸ್ಕರ ಸಭೆಯಲ್ಲಿ ನಿರ್ಧರಿಸಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.