ADVERTISEMENT

ಅಹಿಂಸಾ ಮ್ಯಾರಥಾನ್‌: ಉತ್ಸಾಹದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 4:49 IST
Last Updated 1 ಏಪ್ರಿಲ್ 2024, 4:49 IST
ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಮುಂಜಾನೆ ಅಹಿಂಸಾ ಓಟಕ್ಕೆ ‘ಬಿಗ್‌ಬಾಸ್’ ರಿಯಾಲಿಟಿ ಶೋ ವಿಜೇತ ಕಾರ್ತಿಕ್‌ ಮಹೇಶ್ ಚಾಲನೆ ನೀಡಿದರು
ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಮುಂಜಾನೆ ಅಹಿಂಸಾ ಓಟಕ್ಕೆ ‘ಬಿಗ್‌ಬಾಸ್’ ರಿಯಾಲಿಟಿ ಶೋ ವಿಜೇತ ಕಾರ್ತಿಕ್‌ ಮಹೇಶ್ ಚಾಲನೆ ನೀಡಿದರು   

ಮೈಸೂರು: ಶಾಂತಿ ಮತ್ತು ಅಹಿಂಸೆ ಪ್ರತಿಪಾದನೆಯ ಆಶಯದೊಂದಿಗೆ ನಗರದಲ್ಲಿ ಭಾನುವಾರ ನಡೆದ ‘ಅಹಿಂಸಾ ಓಟ’ದಲ್ಲಿ ನೂರಾರು ಆಸಕ್ತರು ಹೆಜ್ಜೆ ಹಾಕಿದರು.

ಬೆಳಿಗ್ಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ‘ಬಿಗ್‌ಬಾಸ್’ ರಿಯಾಲಿಟಿ ಶೋ ವಿಜೇತ ಕಾರ್ತಿಕ್‌ ಮಹೇಶ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು. 3 ಕಿ.ಮೀ, 5 ಕಿ.ಮೀ ಹಾಗೂ 10 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದವರೂ ಉತ್ಸಾಹದಿಂದ ಪಾಲ್ಗೊಂಡರು. ವಿಜೇತರು ಪದಕಕ್ಕೆ ಕೊರಳೊಡ್ಡುವ ಜೊತೆಗೆ ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡರು.

ಅಹಿಂಸಾ ಮ್ಯಾರಥಾನ್‌ಗೆ ಮುನ್ನ ಸ್ಪರ್ಧಿಗಳು ಜುಂಬೊ ನೃತ್ಯ ಅಭ್ಯಾಸದಲ್ಲಿ ಪಾಲ್ಗೊಂಡರು

ಜೈನ್‌ ಅಂತರರಾಷ್ಟ್ರೀಯ ವ್ಯಾಪಾರ ಒಕ್ಕೂಟದ (ಜಿತೊ) ಮಹಿಳಾ ಘಟಕವು ಈ ಮ್ಯಾರಥಾನ್ ಆಯೋಜಿಸಿದ್ದು ದೇಶದ 69 ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯಿತು. ಜಿತೊ ಮೈಸೂರು ಘಟಕದ ಅಧ್ಯಕ್ಷ ಕಾಂತಿಲಾಲ್‌ ಜೈನ್‌, ಪ್ರಧಾನ ಕಾರ್ಯದರ್ಶಿ ಗೌತಮ್‌ ಸಲೇಚ, ಮಹಿಳಾ ಘಟಕದ ಅಧ್ಯಕ್ಷೆ ಮೋನಾ ಬತೇವ್ರ, ಪ್ರಧಾನ ಕಾರ್ಯದರ್ಶಿ ರಜಿನಿ ನೇತೃತ್ವ ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.