ADVERTISEMENT

ಮೈಸೂರು: ನಿಯಮ ಉಲ್ಲಂಘನೆ ತಡೆಗೆ ಎಐ ಕ್ಯಾಮೆರಾ ಕಣ್ಗಾವಲು

250 ಹೊಸ ಕ್ಯಾಮೆರಾ ಅಳವಡಿಕೆ, ನಿಯಮ ಪಾಲಿಸದಿದ್ದರೆ ದಂಡ

ಶಿವಪ್ರಸಾದ್ ರೈ
Published 17 ಜುಲೈ 2024, 5:02 IST
Last Updated 17 ಜುಲೈ 2024, 5:02 IST
<div class="paragraphs"><p>ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಕಂಟ್ರೋಲ್‌ ರೂಂನಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಐ ಕ್ಯಾಮೆರಾಗಳ ಕಾರ್ಯನಿರ್ವಹಣೆ ಪರಿಶೀಲಿಸಿದರು. ಡಿಸಿಪಿ ಜಾಹ್ನವಿ ಜೊತೆಗಿದ್ದರು </p></div>

ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಕಂಟ್ರೋಲ್‌ ರೂಂನಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಐ ಕ್ಯಾಮೆರಾಗಳ ಕಾರ್ಯನಿರ್ವಹಣೆ ಪರಿಶೀಲಿಸಿದರು. ಡಿಸಿಪಿ ಜಾಹ್ನವಿ ಜೊತೆಗಿದ್ದರು

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ

ಮೈಸೂರು: ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಈಗ ‘ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಐಟಿಎಂಎಸ್‌) ಕಣ್ಗಾವಲು ಹಬ್ಬಿದೆ.

ADVERTISEMENT

ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ 259 ಕ್ಯಾಮೆರಾಗಳು ದಾಖಲಿಸುವ ನಿಯಮ ಉಲ್ಲಂಘನೆ ಮಾಹಿತಿಯನ್ನು ಆಧರಿಸಿಯೇ ಪೊಲೀಸರು ಕ್ಷಿಪ್ರಗತಿಯಲ್ಲಿ ದಂಡ ವಸೂಲು ಮಾಡುತ್ತಿದ್ದಾರೆ.

ಇಲಾಖೆಯು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರು ಹೆಚ್ಚಾಗಿರುವುದು ಕಂಡು ಬಂದಿದ್ದರಿಂದ, ನಿಯಮಗಳ ಕಟ್ಟುನಿಟ್ಟಿನ ಜಾರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ‌ಬೆಂಗಳೂರಿನ ಬಳಿಕ ಮೈಸೂರು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಅದರ ಪರಿಶೀಲನೆಗೆಂದೇ ಈಚೆಗೆ ಎಡಿಜಿಪಿ ಅಲೋಕ್‌ ಕುಮಾರ್‌ ಭೇಟಿ ನೀಡಿದ್ದರು. ‌

ಎಐ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸುವವರ ಗುಣಮಟ್ಟದ ಚಿತ್ರವನ್ನು ಸೆರೆಹಿಡಿಯುತ್ತವೆ. ಅವುಗಳನ್ನು ನಿಯಂತ್ರಿಸುವುದಕ್ಕಾಗಿಯೇ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್‌ ರೂಂನಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ವ್ಯವಸ್ಥೆ ನಿರ್ವಹಣೆಗಾಗಿ ಸುಮಾರು 30 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಟ್ಯಾಬ್‌ಗಳ ಮೂಲಕವೂ ಕ್ಯಾಮೆರಾ ನಿರ್ವಹಿಸಬಹುದಾಗಿದ್ದು, ಈಗಾಗಲೆ ಇಲಾಖೆಗೆ ಪೂರೈಕೆಯಾಗಿವೆ.

ಈ ಹಿಂದೆ ಸುಮಾರು 110 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಅವುಗಳಲ್ಲಿ ಎಐ ತಂತ್ರಜ್ಞಾನ ಇರಲಿಲ್ಲ ಹಾಗೂ ವಾಹನ ಸಂಖ್ಯೆ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.

ದಂಡ ಪಾವತಿ ವಿಧಾನ: ನಿಯಮ ಉಲ್ಲಂಘಿಸಿದ ವಾಹನದ ಆರ್‌ಸಿ ಹೊಂದಿರುವವರ ಮೊಬೈಲ್‌ಗೆ ದಂಡ ಹಾಗೂ ಅದರ ಚಲನ್‌ ಕಳುಹಿಸಲಾಗುತ್ತದೆ. ಅವರು ತಮ್ಮ ಸಮೀಪದ ಠಾಣೆಗೆ ತೆರಳಿ ಮಾಹಿತಿ ಪಡೆಯಬಹುದು. ನಂತರ ತಮಗೆ ಹತ್ತಿರವಿರುವ ಐದು ಸಂಚಾರ ಠಾಣೆ, ಕಮಿಷನರ್ ಕಚೇರಿಯಲ್ಲಿರುವ ಅಟೊಮೇಷನ್‌ ಸೆಂಟರ್‌, ಮಾಹಿತಿ ಕಣಜ, ಕರ್ನಾಟಕ ಒನ್‌ ಹಾಗೂ ಇ ಆ್ಯ‍ಪ್‌ಗಳ ಮೂಲಕ ದಂಡವನ್ನು ಪಾವತಿಸಬಹುದು.

ಮೈಸೂರಿನ ವಿವಿಧ ವೃತ್ತಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾ

7 ರೀತಿಯ ನಿಯಮ ಉಲ್ಲಂಘನೆ ಪತ್ತೆ

‘ಸೀಟ್‌ ಬೆಲ್ಟ್‌ ಧರಿಸದೆ ಪ್ರಯಾಣ ಪ್ರಯಾಣದ ಸಮಯದಲ್ಲಿ ಮೊಬೈಲ್‌ ಬಳಕೆ ತ್ರಿಬಲ್ ರೈಡಿಂಗ್‌ ಹೆಲ್ಮೆಟ್‌ ರಹಿತ ಪ್ರಯಾಣ ಸಂಚಾರ ನಿರ್ಬಂಧಿತ ರಸ್ತೆಯಲ್ಲಿ ಪ್ರಯಾಣ ಸಿಗ್ನಲ್‌ ಜಂಪ್ ಅತಿ ವೇಗದ ಚಾಲನೆ ಮಾಡುವವರನ್ನು ಎಐ ಕ್ಯಾಮೆರಾ ಗುರುತಿಸುತ್ತದೆ. ಚಾಲಕ ಅಥವಾ ಸವಾರ ಹಾಗೂ ವಾಹನ ಸಂಖ್ಯೆಯ ಸ್ಪಷ್ಟ ಚಿತ್ರಣ ದೊರಯುವುದರಿಂದ ದಂಡ ವಿಧಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕರು ತಮ್ಮ ರಕ್ಷಣೆಗಾಗಿ ಸಂಚಾರ ನಿಯಮ ಪಾಲಿಸಬೇಕು’ ಎಂದು ಡಿಸಿಪಿ ಜಾಹ್ನವಿ ತಿಳಿಸಿದರು.

ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳಿಂದ ಸಂಚಾರ ನಿಯಮ ಉಲ್ಲಂಘನೆಯ ನಿಯಂತ್ರಣದ ಜೊತೆಗೆ ಪ್ರಕರಣಗಳ ಪತ್ತೆಯೂ ಸಾಧ್ಯವಾಗುತ್ತದೆ.
–ಸೀಮಾ ಲಾಟ್ಕರ್‌, ನಗರ ಪೊಲೀಸ್‌ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.