ನಂಜನಗೂಡು: ಸಮಾಜ ಸೇವಕ ಕಲ್ಮಳ್ಳಿ ನಟರಾಜು ಅವರು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಲವು ಮಹಿಳಾ ಸೌಹಾರ್ಧದ ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕಿ ನೀಲಾಂಬಿಕಾ ಮಹೇಶ್ ಹೇಳಿದರು.
ನಗರದ ವಿದ್ಯಾನಗರದ ಬಡಾವಣೆಯಲ್ಲಿ ಮಂಗಳವಾರ ಅಕ್ಕಮಹಾದೇವಿ ಮಹಿಳಾ ಸೌಹಾರ್ದ ಸಹಕಾರ ಸಂಘದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಂಘವು ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ದುಡಿಯುವ ಮೂಲಕ ಮಹಿಳೆಯರಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ನೆರವಾಗಿ ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಹೊರಹೊಮ್ಮಲಿ’ ಎಂದು ಹೇಳಿದರು.
ಮುಖಂಡ ಕಂಬ್ರಳ್ಳಿ ನಾಗಪ್ಪ ಮಾತನಾಡಿ, ‘ವಿಶ್ವದ ಮೊದಲ ವಚನಕಾರ್ತಿ ಅಕ್ಕಮಹಾದೇವಿಯ ನಾಮಾಂಕಿತದೊಂದಿಗೆ ಪ್ರಾರಂಭವಾಗಿರುವ ಸಂಘವು ಅಕ್ಕಮಹಾದೇವಿಯ ತತ್ವಾದರ್ಶಗಳನ್ನು ಮೈಗೂಡಿಸಿಗೊಂಡು ಅಭಿವೃದ್ಧಿಯತ್ತ ಮುನ್ನಡೆಯಲಿ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಮಳ್ಳಿ ನಟರಾಜು,ಸಂಘದ ಅಧ್ಯಕ್ಷೆ ಸುಮವತಿ, ನಿರ್ದೇಶಕರಾದ ಗೀತಾ, ಅಂಬಿಕಾಪ್ರಭುಸ್ವಾಮಿ, ಸುನೀತಾಗಿರೀಶ್, ಸವಿತಾ ಶಿವಶಂಕರ್, ಮಂಜುಳಾ ಮಂಜುನಾಥ್, ಕುರಟ್ಟಿ ಮಹೇಶ್, ಹೊಸಪುರ ಜಗದೀಶ್, ಪರಶಿವಮೂರ್ತಿ, ಬಸವಣ್ಣ, ಮಹದೇವಪ್ಪ, ನಂದೀಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.